ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭೋವಿ ಸಮಾಜದಿಂದ ಬೆಳಗಾವಿ ಚಲೋ ಪಾದಯಾತ್ರೆ ಆರಂಭ

ನವಲಗುಂದ : ಭೋವಿ ಸಮಾಜಕ್ಕೆ ಆಗಿತ್ತೀರುವ ಅನ್ಯಾಯವನ್ನು ಖಂಡಿಸಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿದೋದ್ದೇಶ ಕಲ್ಯಾಣ ಸಂಘ ದಿಂದ ನವಲಗುಂದ ದಿಂದ ಬೆಳಗಾವಿ ಸುವರ್ಣಸೌಧದವರೆಗಿನ ಪಾದಯಾತ್ರೆಗೆ ಪಟ್ಟಣದ ನಾಗಲಿಂಗ ಸ್ವಾಮಿ ಮಠದ ವೀರಯ್ಯ ಸ್ವಾಮೀಜಿ ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ವಿಠ್ಠಲ ಭೋವಿ, ನಾವು ಮೂಲತ ಮೆಣೆ, ಪಲ್ಲಕ್ಕಿ ಹೊರುವ (ವಡ್ಡರು, ಬೆಸ್ತರು ಅಲ್ಲದ) ಭೋವಿಗಳಾಗಿದ್ದು, 1950ರಲ್ಲಿಯೇ ಸರಕಾರ ಭೋವಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದರೂ ತಹಶೀಲ್ದಾರರು ಸರಕಾರದ ಆದೇಶಗಳನ್ನು ಪಾಲನೆ ಮಾಡದೇ ಭೋವಿ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಹಾಗೂ ಶಿಂಧುತ್ವ ನೀಡಲು ನೀರಾಕರಿಸುತ್ತಿದ್ದಾರೆ. ಭೋವಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಅಧ್ಯಯನ ನಡೆಸಲು ವಿಧಾನಪರಿಷತ್ ಸದಸ್ಯರಾಗಿದ್ದ ವಿ.ಎಸ್. ಉಗ್ರಪ್ಪನವರ ನೇತೃತ್ವದ ವಿಶೇಷ ಸದನ ಸಮಿತಿಯು ಸರಕಾರಕ್ಕೆ ವರದಿಯನ್ನು ನೀಡಿದ್ದು ಉಗ್ರಪ್ಪನವರ ವರದಿ ಜಾರಿ ಸೇರಿದಂತೆ ಇತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು.

ರಾಜ್ಯ ಕಾರ್ಯಾಧ್ಯಕ್ಷ ಹುಚ್ಚಪ್ಪ ಭೋವಿ, ಬೇಲೂರಪ್ಪ ಭೋವಿ, ಯಲ್ಲಪ್ಪ ಭೋವಿ, ಹುಲಗಪ್ಪ ಭೋವಿ, ನಾಗಪ್ಪ ಭೋವಿ, ಫಕ್ಕಿರೇಶ ಭೋವಿ, ಮುದಕಪ್ಪ ಭೋವಿ, ದೇವಪ್ಪ ಭೋವಿ, ಹುಚ್ಚಪ್ಪ ಕನಕಪ್ಪನವರ, ಮಹಾಂತೇಶ ಭೋವಿ, ಹನಮಂತ ನರಗುಂದ, ಮಲ್ಲಪ್ಪ ಕರಿಸಕಣ್ಣವರ ಸಹಿತ ಅನೇಕರು ಪಾದಯಾತ್ರೆಯಲ್ಲಿದ್ದರು.

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/12/2024 04:02 pm

Cinque Terre

3.86 K

Cinque Terre

0

ಸಂಬಂಧಿತ ಸುದ್ದಿ