ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ರೈತರು ಅಂದ್ರೆ ಅದೇನೊ ಪ್ರೀತಿ,ಗೌರವ ಎನ್ನುವಂತೆ ಪೋಸ್ ನೀಡುವವರೇ ಹೆಚ್ಚು. ಅಷ್ಟೇಯಾಕೆ ನಮ್ಮ ರಾಜಕಾರಣಿಗಳು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅದೇ ಅನ್ನದಾತರ ಬಗ್ಗೆ ಅನೇಕ ಬಾರಿ ಊಡಾಫೆ ಮಾತುಗಳನ್ನಾಡಿದ್ದಾರೆ.
ಆದರೆ ದೇಶದ ಬೆನ್ನೆಲಬಾದ ರೈತರ ಏಳ್ಗೆಗಾಗಿ ನಿಜವಾಗೂ ಎಲೆಮರೆಯ ಕಾಯಿಯಾಗಿ ಶ್ರಮಿಸುತ್ತಿದೆ ದೇಶಪಾಂಡೆ ಫೌಂಡೇಶನ್..
ರೈತರ ಹೆಸರಿನಲ್ಲಿ ಅನೇಕ ಯೋಜನಗಳನ್ನು ಜಾರಿ ಮಾಡುವ ಸರ್ಕಾರ ನಿಜವಾಗಿಯೂ ರೈತ ಈ ಯೋಜನೆಯ ಲಾಭ ಪಡೆಯುತ್ತಿದ್ದಾನೆಯೇ ಎಂದು ತಿಳಿಯುವ ಸಣ್ಣ ಪ್ರಯತ್ನವನ್ನು ಮಾಡುವುದಿಲ್ಲ. ಹಾಗಾಗಿಯೇ ನಮ್ಮ ದೇಶ ಇನ್ನು ಅಭಿವೃದ್ಧಿಶೀಲ ದೇಶವಾಗಿಯೇ ಉಳಿದಿದೆ.
ಆದರೆ ಅನ್ನದಾತನ ಬೆಳವಣಿಗೆಗಾಗಿ ಅವನ ನಾಡಿಮಿಡಿತ ಅರಿತ ದೇಶಪಾಂಡೆ ಫೌಂಡೇಶನ್ ಉತ್ತಮ ಬೆಳೆ ಬೆಳೆಯಲು ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡುತ್ತಿದೆ.
ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ರೈತನಿಗೆ ಜೀವಜಲ ರಕ್ಷಣೆಗೆ ಅನುಕೂಲವಾಗುವಂತೆ ಕೆರೆ ನಿರ್ಮಾಣ ಮಾಡಿಕೊಡುವ ಮೂಲಕ ದೇಶಪಾಂಡೆ ಫೌಂಡೇಶನ್ ತನ್ನ ಸಾರ್ಥಕತೆಯನ್ನು ಮೆರೆಯುತ್ತಿದೆ.ದೇಶಪಾಂಡೆ ಫೌಂಡೇಶನ್ ನಿಂದ ಕೆರೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡ ಶಿಕ್ಷಿತ ರೈತ ಬಸವರಾಜ ಶಿರಸಂಗಿ ಹೇಳುವುದು ಹೀಗೆ..
ಪಿಯುಸಿ ವಿದ್ಯಾಭ್ಯಾಸ ಪೂರೈಸಿದ 29 ವರ್ಷದ ಬಸವರಾಜ ಶಿರಸಂಗಿ ತಮ್ಮ 5 ಎಕರೆ ಒಣಬೇಸಾಯದ ಜಮೀನಿನಲ್ಲಿ ಮಳೆಯಾಶ್ರಿತ ಒಂದು ಬೆಳೆಯನ್ನು ಬೆಳೆಯಲು ಮಾತ್ರ ಶಕ್ತನಾಗಿದ್ದ ಅದು ಕಡಲೆ ಇಲ್ಲ ಹೆಸರು ಯಾವುದಾರೂ ಒಂದು ಬೆಳೆ ಬೆಳೆದು ವಾರ್ಷಿಕ 60 ಸಾವಿರ ಆದಾಯಗಳಿಸುತ್ತಿದ್ದರು.
ಯಾವಾಗ ಈ ರೈತನ ಬದುಕಿನಲ್ಲಿ ದೇಶಪಾಂಡೆ ಫೌಂಡೇಶನ್ ಆಗಮನವಾಯಿತೊ ಈ ರೈತನ ಬದುಕೇ ಬದಲಾಗಿದೆ. ಹೌದು ತನ್ನ ಒಣ ಬೇಸಾಯದ ಹೊಲದ ಒಂದು ಬದಿಯಲ್ಲಿ 80 ಅಡಿ ಉದ್ದ, 80 ಅಡಿ ಅಗಲ ಹಾಗೂ 12 ಅಡಿ ಆಳದ ಕೆರೆ ನಿರ್ಮಾಣ ಮಾಡಿಕೊಂಡು ವರ್ಷಕ್ಕೆ ಎರಡು ಬೆಳೆ ಬೆಳೆದು ವಾರ್ಷಿಕ ಬರೋಬ್ಬರಿ 1.2 ಲಕ್ಷದಿಂದ 1.3 ಲಕ್ಷದ ವರೆಗೆ ಆದಾಯಗಳಿಸುತ್ತಿದ್ದಾರೆ.
ಮೊದಲು ಒಂದೇ ಬೆಳೆ ಬೆಳೆಯುತ್ತಿದ್ದ ರೈತ ಈಗಾ ಕಡಲೆ, ಹೆಸರು,ಜೋಳ ಸೇರಿದಂತೆ ವಿವಿಧ ಬೆಳೆ ಬೆಳೆಯುವ ಮೂಲಕ ಉತ್ತಮ ಜೀವನ ನಡೆಸುತ್ತಿದ್ದಾರೆ.
ಕಳೆದ 5 ರಿಂದ 6 ವರ್ಷದಲ್ಲಿ ಇದೊಂದೇ ಗ್ರಾಮದಲ್ಲಿ ದೇಶಪಾಂಡೆ ಫೌಂಡೇಶನ್ ನಿಂದ ಬರೋಬ್ಬರಿ 50 ರಿಂದ 60 ಕೆರೆಗಳ ನಿರ್ಮಾಣವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಕೆರೆ ನಿರ್ಮಾಣದಿಂದ ಮಳೆ ನೀರು ಸಂಗ್ರವಾಗುತ್ತಿರುವುದರಿಂದ ಹಿಂಗಾರು ಬೆಳೆಯಲು ರೈತರು ಧೈರ್ಯ ಮಾಡುತ್ತಿದ್ದಾರೆ.
ಇನ್ನು ಕಲ್ಮೇಶ್ವರ ಸಂಘದಿಂದ ರೈತರಿಗೆ ಯಾವೆಲ್ಲಾ ಲಾಭಗಳಿವೆ ಹಾಗೂ ಕೆರೆ ನಿರ್ಮಾಣದ ಪೂರ್ವ ಮತ್ತು ಕರೆ ನಿರ್ಮಾಣದ ಬಳಿಕ ರೈತರು ಎಷ್ಟೇಲ್ಲಾ ಲಾಭ ಪಡೆದಿದ್ದಾರೆ ಎನ್ನುವುದನ್ನು ಸ್ವತಹ ರೈತ ಬಸವರಾಜ ಶಿರಸಂಗಿ ಹೇಳಿರುವುದನ್ನು ನೀವೆ ಕೇಳಿ..
Kshetra Samachara
02/02/2021 06:55 pm