" ನೇಗಿಲು ತುದಿಯೊಳಗಡಗಿದೆ ಕರ್ಮ ನೇಗಿಲ ಮೇಲೆ ನಿಂತಿದೆ ಧರ್ಮ '' ಹೌದು ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳು ನಿಜಕ್ಕೂ ಪ್ರಸ್ತುತ. ಆದರೆ ಪ್ರಕೃತಿಯ ಮುನಿಸು ಹಾಗೂ ಹವಾಮಾನದ ವೈಪರಿತ್ಯದಿಂದ ನೇಗಿಲಯೋಗಿಯ ಬದುಕು ದುರ್ಬರವಾಗಿದೆ.
ಕೈಕೊಡುತ್ತಿರುವ ವರುಣನ ಮೇಲೆಯೇ ಅವಲಂಬಿತವಾಗಿರುವ ರೈತರು ಕೃಷಿಯನ್ನೇ ತ್ಯಜಿಸುವ ಹಂತಕ್ಕೆ ಬಂದಿದ್ದಾರೆ. ಆದರೆ ಅವರ ಬೆಂಬಲಕ್ಕೆ ನಿಂತು ನಿರಂತರ ಪ್ರೋತ್ಸಾಹಿಸುತ್ತಿದೆ ದೇಶಪಾಂಡೆ ಫೌಂಡೇಶನ್. ಮಳೆ ನೀರನ್ನು ಸಂಗ್ರಹಿಸುವ ಕೃಷಿಹೊಂಡ ಪರಿಕಲ್ಪನೆ ಇಂದು ನವಲಗುಂದ ರೈತರ ಬದುಕನ್ನೇ ಬಂಗಾರವಾಗಿರಿಸಿದೆ. ಬನ್ನಿ ತಾಲೂಕಿನ ಶಲವಡಿ ಗ್ರಾಮದ ಪದವಿಧರ ರೈತ, ಶಿವರಡ್ಡಿ ಮರೆಡ್ಡಿ ಅವರ ಸುತ್ತಾಡಿ ಬರೋಣ.
ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಶಿವರಡ್ಡಿ, ವರುಣನ ಕಣ್ಣುಮುಚ್ಚಾಲೆಯಿಂದ ಬಳಲಿ ಹೋಗಿದ್ದರು. ಆಗ ಅವರ ನೆರವಿಗೆ ಬಂತು ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ಯೋಜನೆ. ತಮ್ಮ ಏಳು ಎಕರೆ ಹೊಲದಲ್ಲಿ 100 ಅಡಿ ಉದ್ದ 100 ಅಗಲ ಹಾಗೂ 12 ಅಡಿ ಆಳದ ಹೊಂಡವನ್ನು ತೆಗೆದು ಹೊಲದ ಎಲ್ಲ ದಿಕ್ಕುಗಳಿಂದಲೂ ಮಳೆ ನೀರು ಹರಿದು ಬರುವಂತೆ ನೋಡಿಕೊಂಡರು.
ಮೊದಲು ಕೇವಲ ಜೋಳ ಗೋದಿ ಹೆಸರು ಬೆಳೆದು ವರ್ಷಕ್ಕೆ ಒಂದು ಲಕ್ಷ ರೂ ಆದಾಯ ಗಳಿಸುತ್ತಿದ್ದ ಇವರು ಹೊಂಡದ ನೀರು ಬಳಸಿ ಈರುಳ್ಳಿ ಮೆಣಸಿನಕಾಯಿ,ಹತ್ತಿ, ಕಡಲೆ ಗೋದಿಯಂತಹ ವಾಣಿಜ್ಯ ಬೆಳೆ ಬೆಳೆದು ವರ್ಷಕ್ಕೆ ಎಕರೆಗೆ 2.5 ಲಕ್ಷದ ವರೆಗೆ ಲಾಭ ಗಳಿಸಿದ ನೆಮ್ಮದಿಯಿಂದಿದ್ದಾರೆ. ಅವರ ಕೃಷಿ ಖಷಿಯನ್ನು ಬಣ್ಣಿಸುವುದಕ್ಕಿಂತ ಬನ್ನಿ ಅವರಿಂದಲೇ ಕೇಳೋಣ.
Kshetra Samachara
31/01/2021 09:32 pm