ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸಾಮಾಜಿಕ ಕಳಕಳಿ: ಹುಬ್ಬಳ್ಳಿಯ ನರರೋಗ ತಜ್ಞ ಡಾ‌.ವಿಜಯಮಹಾಂತೇಶ ಪೂಜಾರಿ

ಹುಬ್ಬಳ್ಳಿ: ದೇವರು ಎಲ್ಲ ಕಡೆಯಲ್ಲಿಯೂ ಇರಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲ ಕೆಲಸವನ್ನು ದೇವರೇ ಮಾಡಲು ಆಗುವುದಿಲ್ಲ ಎಂಬುವಂತ ಮಾತಿಗೆ ದೇವರ ಸ್ವರೂಪದಲ್ಲಿಯೇ ವೈದ್ಯರನ್ನು ಕಾಣುತ್ತೇವೆ. ಅಮೂಲ್ಯವಾದ ಜೀವನದ ಆರೋಗ್ಯಕ್ಕೆ ಮತ್ತಷ್ಟು ಬಲ ತುಂಬಿ ನಮ್ಮ ನ್ಯೂನತೆಗಳನ್ನು ಚಿಕಿತ್ಸೆಯ ಮೂಲಕ ಗುಣಪಡಿಸುವ ಕಾರ್ಯವನ್ನು ವೈದ್ಯರು ಮಾಡುತ್ತಿದ್ದಾರೆ. ಅಂತಹ ವೈದ್ಯರ ದಿನಾಚರಣೆ ಅಂಗವಾಗಿ ಸಾಧಕ ವೈದ್ಯರ ಪರಿಚಯ ಮಾಡುತ್ತಿದ್ದೇವೆ. ಹಾಗಿದ್ದರೇ ಇಲ್ಲಿದೆ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡ ವೈದ್ಯರೊಬ್ಬರ ಕಂಪ್ಲಿಟ್ ಸ್ಟೋರಿ..

ಮೆದುಳು, ಬೆನ್ನು ಹುರಿ ಹಾಗೂ ನರ ರೋಗ ಸಮಸ್ಯೆ ಅಂದರೆ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಅಲ್ಲದೇ ಜನರಿಗೆ ಚಿಕಿತ್ಸೆಗೆ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೋಗಬೇಕು ಎನ್ನುವ ಆತಂಕ ಮಾತ್ರ ಸಹಜ. ಈ ಎಲ್ಲ ಸಾರ್ವಜನಿಕರ ಭಯವನ್ನು ಹೋಗಲಾಡಿಸಿ ಗುಣಮಟ್ಟದ ಚಿಕಿತ್ಸೆ ನೀಡಲು ಇಲ್ಲೊಬ್ಬ ವೈದ್ಯರು ಸಿದ್ಧರಾಗಿದ್ದಾರೆ.. ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯ ವೈದ್ಯರಾದ ಡಾ.ವಿಜಯಮಹಾಂತೇಶ ಪೂಜಾರಿ ಅವರು ಸುಮಾರು ವರ್ಷಗಳಿಂದ ನರರೋಗ ಸಂಬಂಧಿಸಿದ ರೋಗಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಹುಬ್ಬಳ್ಳಿಯ ಕೋರ್ಟ್ ಸರ್ಕಲ್ ಹತ್ತಿರದ ಗಿರಿರಾಜ್ ಆನೆಕ್ಸ್ ನಲ್ಲಿರುವ ನರ ವಿಜ್ಞಾನ ಆಸ್ಪತ್ರೆಯಲ್ಲಿಯೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಮೆದುಳು, ಬೆನ್ನು ಹುರಿ ಹಾಗೂ ನರರೋಗ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆ ಮೂಲಕ ಗುಣಪಡಿಸುವ ಕಾರ್ಯವನ್ನು ಆಸ್ಪತ್ರೆ ಮಾಡುತ್ತಿದ್ದಾರೆ. ಅಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಆಸ್ಪತ್ರೆ ಆಗಿದ್ದು, ನಿಮ್ಮ ಯಾವುದೇ ಮೆದುಳಿನ ಸಮಸ್ಯೆ, ಬೆನ್ನು ಹುರಿ ಸಮಸ್ಯೆ ಅಲ್ಲದೇ ಇನ್ನಿತರ ನರರೋಗದ ಸಮಸ್ಯೆಗಳಿದ್ದರೂ ಪರಿಣಾಮಕಾರಿ ಚಿಕಿತ್ಸೆಯನ್ನು ನರ ವಿಜ್ಞಾನ ಆಸ್ಪತ್ರೆಯಲ್ಲಿ ದೊರೆಯಲಿದೆ. ಹಾಗಿದ್ದರೇ ವೈದ್ಯರ ಮಾತನ್ನು ಕೇಳೋಣ ಬನ್ನಿ...

ಇನ್ನೂ ನರ ವಿಜ್ಞಾನ ಆಸ್ಪತ್ರೆಯಲ್ಲಿ ತಲೆ ನೋವು, ಬೆನ್ನು ನೋವು, ಕುತ್ತಿಗೆ ನೋವು, ನರಗಳ ದೌರ್ಬಲ್ಯ, ಕಾಲು ನೋವು, ಲಕ್ವಾ, ಸ್ಟ್ರೋಕ್,ಪಾರ್ಶ್ವವಾಯು, ಮೆದುಳು ಮತ್ತು ನರಗಳ ಜ್ವರ, ಕೀವು,ಸೋಂಕು, ಮೆದುಳು ಮತ್ತು ಬೆನ್ನು ಹುರಿ ಟಿಟಿ ಕಾಯಿಲೆ, ಮೆದುಳಿನ ನೀರು ಕುತ್ತುವಿಕೆ ಸೇರಿದಂತೆ ಹಲವಾರು ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಮೂಲಕ ನಗರ ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಹೃದಯಿ ವೈದ್ಯರಾಗಿದ್ದಾರೆ. ಇನ್ನೂ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿರುವ ಈ ವೈದ್ಯರು ದೇಶವನ್ನು ಕಾಯುವ ಯೋಧರಿಗೆ ಚಿಕಿತ್ಸೆ ಶುಲ್ಕದಲ್ಲಿ ರಿಯಾಯಿತಿ ನೀಡುವ ಮೂಲಕ ಎಲೆ ಮರೆಯ ಕಾಯಿಯಂತೇ ಭಾರತಾಂಭೆಯ ಸೇವೆಯನ್ನು ಮಾಡುತ್ತಿರುವುದು ವಿಶೇಷವಾಗಿದೆ. ಅಲ್ಲದೇ ವಿಶ್ವ ಪಾರ್ಶ್ವವಾಯು ದಿನ, ಮೆದುಳಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಬೈಕ್ ರ್ಯಾಲಿ, ಜಾಗೃತಿ ಅಭಿಯಾನ, ಆಪ್ತ ಸಮಾಲೋಚನೆ ಹೀಗೆ ಹತ್ತು ಹಲವಾರು ಕಾರ್ಯಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇನ್ನೂ ಜನರಿಗೆ ಸ್ಥಳೀಯವಾಗಿ ಆರೋಗ್ಯದ ಬಗ್ಗೆ ಕಾಳಜಿಯನ್ನುಂಟು ಮಾಡುವ ಸದುದ್ದೇಶದಿಂದ ಸಾಕಷ್ಟು ಉಚಿತ ಆರೋಗ್ಯ ಶಿಬಿರಗಳನ್ನು ಮಾಡಿದ್ದಾರೆ. ಅಲ್ಲದೇ ವಿಮಾ ಯೋಜನೆ ಅಡಿಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಕೂಡ ಮಾಡುವ ಮೂಲಕ ಸಾಮಾಜಿಕ ಕಾರ್ಯ ಮಾಡಿದ್ದಾರೆ. ರೋಗ ಬರುವ ಮುಂಚೆಯೇ ಆರೋಗ್ಯದ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ ಕೇಳಿ..

ಇನ್ನೂ ಅದೆಷ್ಟೋ ರೋಗಿಗಳಿಗೆ ಮರು ಜನ್ಮ ನೀಡುವಂತ ಶ್ಲಾಘನೀಯ ಕಾರ್ಯವನ್ನು ಈ ವೈದ್ಯರು ಮಾಡಿದ್ದು, Cerebellar Hemangioblastomas, POSTERIOR Communicaing Artery aneurysm clipping ಅಂತಹ ಯಶಸ್ವಿಯಾಗಿ ಸುಮಾರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಅಲ್ಲದೆ ತಮ್ಮದೇ ಆದ ಕಾರ್ಯವೈಖರಿಯ ಮೂಲಕ ಜೀವನದಲ್ಲಿ ಜಿಗುಪ್ಸೆಗೊಂಡ ಅದೆಷ್ಟೋ ಜೀವಗಳಿಗೆ ಪುನರುಜ್ಜೀವನ ನೀಡಿದ್ದಾರೆ. ಚಿಕಿತ್ಸೆ ಬಗ್ಗೆ ಭಯವಿದ್ದರೇ ಇಲ್ಲಿದೆ ವೈದ್ಯರ ಆಶೋತ್ತರದ ಮಾತುಗಳು.

ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಮೆದುಳು, ಬೆನ್ನು ಹುರಿ ಹಾಗೂ ನರರೋಗ ಸಂಬಂಧಿಸಿದ ಕಾಯಿಲೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಂತ ಆಸ್ಪತ್ರೆ ನಮ್ಮ ಹುಬ್ಬಳ್ಳಿಯಲ್ಲಿಯೇ ಇರುವುದು ನಮ್ಮೆಲ್ಲರ ಸೌಭಾಗ್ಯ ಹಾಗಿದ್ದರೇ ತಡ ಯಾಕೆ ಈಗಲೇ ಭೇಟಿ ನೀಡಿ..

ನರವಿಜ್ಞಾನ ಆಸ್ಪತ್ರೆ

ಗಿರಿರಾಜ್ ಆನೆಕ್ಸ್ ಬಿಲ್ಡಿಂಗ್

ಹಳೆ ಕೋರ್ಟ್ ಸರ್ಕಲ್ ಹತ್ತಿರ

ಹುಬ್ಬಳ್ಳಿ

ದೂರವಾಣಿ ಸಂಖ್ಯೆ: 0836-2956622

ಮೊಬೈಲ್ ಸಂಖ್ಯೆ:9986956622

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/07/2022 07:55 am

Cinque Terre

130.38 K

Cinque Terre

8

ಸಂಬಂಧಿತ ಸುದ್ದಿ