ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಾಣಂತಿಯರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿದ ಚಿಟಗುಪ್ಪಿ ಆಸ್ಪತ್ರೆ, ದಿಟ್ಟ ನಿರ್ಧಾರಕ್ಕೆ ಮುಂದಾದ ವೈದ್ಯರು

ಹುಬ್ಬಳ್ಳಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಐವಿ ದ್ರಾವಣದ ಬಗ್ಗೆ ವೈದ್ಯರು ಪರಿಶೀಲನೆ ನಡೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಾಣಂತಿಯರ ಸಾವಿನ‌ ಪ್ರಕರಣ ಹೆಚ್ಚಾದ ಹಿನ್ನೆಲೆ ಹುಬ್ಬಳ್ಳಿಯಲ್ಲೂ ಎಚ್ಚೆತ್ತ ಸರ್ಕಾರಿ ಆಸ್ಪತ್ರೆಗಳು, ಧಾರವಾಡ ಜಿಲ್ಲಾ ಸರ್ಕಾರಿ‌ ಆಸ್ಪತ್ರೆಗಳಿಂದ ಐವಿ‌ ದ್ರಾವಣ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ. ಹೌದು.. ಐವಿ ದ್ರಾವಣ‌ ಗುಣಮಟ್ಟದ ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಿದ ಆಸ್ಪತ್ರೆ ವೈದ್ಯಾಧಿಕಾರಿಗಳು, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಿಂದಲೂ ಐವಿ ದ್ರಾವಣ ಪರಿಶೀಲನೆಗೆ ಮುಂದಾಗಿದ್ದಾರೆ.

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಪಶ್ಚಿಮ ಬಂಗಾಳ ಫಾರ್ಮಸ್ಯುಟಿಕಲ್ ಕಂಪನಿಯಿಂದ ಧಾರವಾಡ ಜಿಲ್ಲೆಗೆ ಪೂರೈಸಿದ ಐವಿ ದ್ರಾವಣದ ಗುಣಮಟ್ಟದ ಪರಿಶೀಲನೆಗೆ ಜಿಲ್ಲಾ ಔಷಧ ನಿಯಂತ್ರಕ‌ ಘಟಕ ಮುಂದಾಗಿದ್ದು, ಈಗಾಗಲೇ ಐವಿ ದ್ರಾವಣವನ್ನ ಬೆಂಗಳೂರಿನ‌ ಪ್ರಯೋಗಾಲಯಕ್ಕೆ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಿಂದ ಕಳಿಸಲಾಗಿದೆ. ಐವಿ ದ್ರಾವಣ ಪರಿಶೀಲನೆ ಮೂಲಕ ಬಾಣಂತಿಯರ ಸುರಕ್ಷತಾ ಕ್ರಮಕ್ಕೆ ಚಿಟಗುಪ್ಪಿ ಆಸ್ಪತ್ರೆಯು ಮುಂದಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಿಟ್ಟರೆ ಎರಡನೇ ಅತೀ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಟಗುಪ್ಪಿ ಆಸ್ಪತ್ರೆಯ, ವೈದ್ಯಾಧಿಕಾರಿಗಳಿಂದ ಐವಿ ದ್ರಾವಣ ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿ ದಿನ ನೂರಾರು ಗರ್ಭಿಣಿಯರು ದಾಖಲಾಗುವ ಚಿಟಗುಪ್ಪಿ‌ ಆಸ್ಪತ್ರೆಯಲ್ಲಿ ಬಾಣಂತಿಯರ ಸುರಕ್ಷತೆಗೆ ಕ್ರಮ‌ವಹಿಸಿದ್ದಾರೆ. ಈ‌ ಮೂಲಕ‌ ಬಾಣಂತಿಯರ ವಿಚಾರದಲ್ಲಿ ಮುಂಜಾಗ್ರತಾ ಕ್ರಮಕ್ಕೆ ಆಸ್ಪತ್ರೆ ವೈದ್ಯರು ಮುಂದಾಗಿದ್ದಾರೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/12/2024 07:16 pm

Cinque Terre

156.04 K

Cinque Terre

0

ಸಂಬಂಧಿತ ಸುದ್ದಿ