ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ವಿಕಲ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣದ ಜೊತೆ ಆರೋಗ್ಯ

ಕುಂದಗೋಳ: ಪಟ್ಟಣದ ಪುರ ಶಾಲೆಯಲ್ಲಿರುವ ವಿಕಲಚೇತನ ಮಕ್ಕಳ ಶಾಲಾ ಪೂರ್ವ ಸಿದ್ಧತಾ ಕೇಂದ್ರವು, ವಾರದಲ್ಲಿ ಒಂದು ದಿನ ವಿಕಲ ವಿಶೇಷ ಚೇತನ ಮಕ್ಕಳ ನ್ಯೂನತೆ ಸರಿಪಡಿಸಲು ಕಾರ್ಯ ಪ್ರವೃತ್ತವಾಗಿ, ನುರಿತ ವೈದ್ಯರಿಂದ ಮಕ್ಕಳ ಆರೋಗ್ಯ ತಪಾಸಣೆ ಜೊತೆ ದೈಹಿಕ, ಶಾರೀರಿಕ ಬೆಳವಣಿಗೆ ಒತ್ತು ನೀಡುತ್ತಿದೆ.

ಕುಂದಗೋಳ ತಾಲೂಕಿನಲ್ಲಿ ಒಟ್ಟು 52 ಗೃಹ ಶಿಕ್ಷಣ ಆಧಾರಿತ ಮಕ್ಕಳು, 368 ವಿಶೇಷ ಮತ್ತು ವಿಕಲಚೇತನ ಮಕ್ಕಳಿದ್ದಾರೆ. ಆ ಮಕ್ಕಳ ದೈಹಿಕ, ಶಾರೀರಿಕ, ಮಾನಸಿಕ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ವಾರದಲ್ಲಿ ಒಂದು ದಿನ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ವ್ಯಾಯಾಮಕ್ಕೆ ವಿಕಲಚೇತನ ಮಕ್ಕಳ ಶಾಲಾ ಪೂರ್ವ ಸಿದ್ಧತಾ ಕೇಂದ್ರವೂ ಅನುಕೂಲವಾಗಿದೆ.

ಕೇಂದ್ರದಲ್ಲಿ ಮಾಹಿತಿಗೆ ಒಟ್ಟು 3 ಜನ ಶಿಕ್ಷಕ ಸಿಬ್ಬಂದಿ, ಮಕ್ಕಳಿಗೆ ವ್ಯಾಯಾಮಕ್ಕೆ ಬಳಸುವ ಪರಿಕರಗಳು ಲಭ್ಯವಿದ್ದು, ಕೇವಲ ವೈದ್ಯರು ಬಂದ ದಿನ ಮಾತ್ರ ಕೇಂದ್ರಕ್ಕೆ ಬರುವ ವಿಕಲ ವಿಶೇಷ ಚೇತನ ಮಕ್ಕಳ ಪಾಲಕರು, ನಿತ್ಯವೂ ಈ ಪರಿಕರಗಳನ್ನು ಬಳಸಲು ಅವಕಾಶವಿದೆ.

ಇದಲ್ಲದೆ ವಾರಕ್ಕೊಮ್ಮೆ ಮಕ್ಕಳನ್ನು ವಿಕಲಚೇತನರ ಶಾಲಾ ಪೂರ್ವ ಸಿದ್ಧತಾ ಕೇಂದ್ರಕ್ಕೆ ಕರೆ ತರುವ ಮಕ್ಕಳಿಗೆ ತಿಂಗಳಿಗೆ 350 ಸಾರಿಗೆ ಭತ್ಯೆ ಮತ್ತು ಪಾಲಕರಿಗೆ 300 ಬೆಂಗಾವಲು ಭತ್ಯೆ ನೀಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ಇಲ್ಲದ 1 ರಿಂದ 10 ನೇ ತರಗತಿ ಗೃಹ ಶಿಕ್ಷಣ ಆಧಾರಿತ ಮಕ್ಕಳು,ಈ ಸೌಲಭ್ಯ ಬಳಸಿಕೊಳ್ಳುವ ಮಾಹಿತಿಗೆ ಶಿಕ್ಷಕರು ಡಿ.ಸಿ.ಶಾನವಾಡ 9972620101 ಅಥವಾ ಎನ್.ಜಿ.ಕೊಡ್ಲಿ 9886345703 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

24/02/2022 10:41 am

Cinque Terre

37.1 K

Cinque Terre

1

ಸಂಬಂಧಿತ ಸುದ್ದಿ