ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಕಾಲಕ್ಕೆ ಅಂಬುಲೆನ್ಸ್ ಬಾರದೇ ವ್ಯಕ್ತಿ ಸಾವು-ಇಲಾಖಾ ವಿಚಾರಣೆಗೆ ಸಮಿತಿ ರಚನೆ

ಕಲಘಟಗಿ: ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದೆ ತಾಲೂಕು ಆಸ್ಪತ್ರೆಯಲ್ಲಿ ಮರಣ ಹೊಂದಿದ ವ್ಯಕ್ತಿಯ ಸಂಬಂಧಿಕರು ದೂರು ಕೊಟ್ಟ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆಗೆ ಐವರು ಸದಸ್ಯರ ಸಮಿತಿ ರಚಿಸಲಾಗಿದೆ.

ಜಿಲ್ಲಾ ನೂಡಲ್ ಅಧಿಕಾರಿ ಡಾ. ಶ್ರೀಮತಿ ಶಶಿಕಲಾ ಅವರ ನೇತ್ರತ್ವದ ತಂಡ, ಬುಧವಾರ ಬೆಳಿಗ್ಗೆ ವಿಚಾರಣೆಗೆ ಸ್ಥಳೀಯ ತಾಲೂಕಾ ಸರಕಾರಿ ಆಸ್ಪತ್ರೆಗೆ ಆಗಮಿಸಿ, ತೀವ್ರ ವಿಚಾರಣೆ ನಡೆಸಿ ಸಿಬ್ಬಂದಿಯಿಂದ ಹಾಗೂ ಜನರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಮೃತ ಶಂಕ್ರಯ್ಯ ಹಿರೇಮಠ ಅವರು ಕೆರೆಯಲ್ಲಿ ಮುಳುಗಿ, ಸಕಾಲಕ್ಕೆ ಅಂಬುಲೆನ್ಸ್ ಬಾರದೆ, ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದರು. ಅವರ ಸಂಬಂಧಿಕರು ಅಂಬುಲೆನ್ಸ್ ವಿಳಂಬವಾಗಿ ಸಕಾಲಕ್ಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ.

ಇಲಾಖಾ ವಿಚಾರಣೆ ಮಾಡಿ ಘಟನೆಗೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ನೂಡಲ್ ಅಧಿಕಾರಿ ಡಾ. ಶಶಿಕಲಾ ನಿಂಬಣ್ಣವರ ತಿಳಿಸಿದರು.

Edited By : Shivu K
Kshetra Samachara

Kshetra Samachara

02/02/2022 08:08 pm

Cinque Terre

21.09 K

Cinque Terre

2

ಸಂಬಂಧಿತ ಸುದ್ದಿ