ಹುಬ್ಬಳ್ಳಿ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನವನಗರದ ದಕ್ಷ ಅಸ್ಪತ್ರೆ ವತಿಯಿಂದ ಭಾನುವಾರ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಕಿಟ್ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅತಿಥಿಗಳಾಗಿದ್ದ ಮಾಜಿ ಮೇಯರ್ ಚಂದ್ರಶೇಖರ ಮನಗುಂಡಿ, ಶ್ರೀಮತಿ ಸುನಿತಾ ಮಾಳವದೆ, ಬುರ್ಲಿ ಅವರು ಹಿರಿಯ ನಾಗರಿಕರಿಗೆ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಮನಗುಂಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನೌಷಧಿಯಿಂದಾಗಿ ಇಂದು ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲ ರೀತಿಯ ಔಷಧಿಗಳು ದೊರೆಯುವಂತಾಗಿದೆ. ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ದಕ್ಷ ಆಸ್ಪತ್ರೆಯ ಡಾ. ಮುರಗೇಶ್ ಸುಂಕದ ಅವರ ಕಾರ್ಯವನ್ನು ಶ್ಲಾಘಿಸಿದರು.
ಇನ್ನುಳಿದ ಅತಿಥಿಗಳೂ ಸಹ ಜನೌಷಧಿ ಮಹತ್ವ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪಲ್ಗೊಂಡ ನೂರಕ್ಕೂ ಹೆಚ್ಚು ಹಿರಿಯ ನಾಗರಿಕರು ಕಿಟ್ ಪಡೆದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಡಾ. ಅಶ್ವಿನಿ, ಡಾ: ರವಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ದಕ್ಷ ಆಸ್ಪತ್ರೆ ಪರವಾಗಿ ಡಾ.ಮುರುಗೇಶ ಸುಂಕದ ಶಾಲು ಹೊದಿಸಿ ಅತಿಥಿಗಳನ್ನು ಸನ್ಮಾನಿಸಿದರು.
Kshetra Samachara
10/10/2021 02:10 pm