ಧಾರವಾಡ: ಇತ್ತೀಚೆಗೆ ಸಾಕಷ್ಟು ಬಳಕೆಗೆ ಬರುತ್ತಿರುವ ಟೇಸ್ಟಿಂಗ್ ಪೌಡರ್ ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತಿದ್ದು, ಸರ್ಕಾರ ಅದನ್ನೂ ಕೂಡಲೇ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಸಂಸ್ಕಾರ ಫೌಂಡೇಶನ್ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
ಅಜಿನೋಮೋಟೋ ಎಂಬ ಸಕ್ಕರೆ ರೂಪದ ಈ ವಸ್ತುವನ್ನು ಮುಖ್ಯವಾಗಿ ಗೋಬಿ ಮಂಚೂರಿ, ಪ್ರೈಡರೈಸ್, ನೂಡಲ್ಸ್ ಸೇರಿದಂತೆ ಮುಂತಾದ ಫಾಸ್ಟ್ ಫುಡ್ ಗಳಲ್ಲಿ ಹಾಕಲಾಗುತ್ತಿದ್ದು, ಇದರಿಂದ ಮಾರಕ ರೋಗಗಳು ಬರುತ್ತಿವೆ ಎಂದು ಸಂಸ್ಕಾರ ಫೌಂಡೇಶನ್ ಅಧ್ಯಕ್ಷ ಆರ್.ಲಕ್ಷ್ಮಣ ಹೇಳಿದರು.
ಈ ಪದಾರ್ಥ ತಿನ್ನುವುದರಿಂದ ಬ್ರೈನ್ ಟ್ಯೂಮರ್, ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತಿದ್ದು, ಸರ್ಕಾರ ಕೂಡಲೇ ಅದನ್ನು ನಿಷೇಧಿಸಬೇಕು ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
Kshetra Samachara
20/01/2021 07:00 pm