ಅಣ್ಣಿಗೇರಿ : ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಕೋವಿಡ್-19 ಲಸಿಕೆ ವಿತರಣೆ ಕೇಂದ್ರವನ್ನು ತಹಶಿಲ್ದಾರ ಕೊಟ್ರೇಶ್ವರ ಗಾಳಿ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.ನಂತರ ಪ್ರಥಮವಾಗಿ ಸ್ಥಳೀಯ ಅಂಗನವಾಡಿ ಸಿಬ್ಬಂದಿಳಿಗೆ ಲಸಿಕೆ ನೀಡಲಾಯಿತು. ಒಟ್ಟು 30 ಜನರಿಗೆ ಇಂದು ಲಸಿಕೆ ನೀಡಲಾಗಿದೆ ಎಂದು ಆಡಳಿತಾಧಿಕಾರಿ ಡಾ.ಅಶೋಕ ಅಗರವಾಲ ಹೇಳಿದರು. ಕಾರ್ಯಕ್ರಮದಲ್ಲಿ ನವಲಗುಂದ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಎಲ್.ಕೆ.ಜೂಲಕಟ್ಟಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
18/01/2021 01:27 pm