ಧಾರವಾಡ: ಧಾರವಾಡದ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧಾರವಾಡ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಮತ ಎಣಿಕೆ ಕೇಂದ್ರದ ಸುತ್ತ ವಿವಿಧ ಹಳ್ಳಿಗಳ ಜನ ಮಾಸ್ಕ್ ಗಳಿಲ್ಲದೇ ಸೇರಿದ್ದು, ಅವರನ್ನು ಎಚ್ಚರಿಸುವುದಕ್ಕೋಸ್ಕರ ಧಾರವಾಡ ಜಿಲ್ಲಾಡಳಿತ ಕೊರೊನಾ ವೇಷಧಾರಿಯನ್ನು ರಸ್ತೆಗಿಳಿಸಿದೆ.
ಮತ ಎಣಿಕೆ ಕೇಂದ್ರದ ಸುತ್ತ ಸಂಚರಿಸುತ್ತಿರುವ ಕೊರೊನಾ ವೇಷಧಾರಿ ಯಾರು ಮಾಸ್ಕ್ ಹಾಕುತ್ತಿಲ್ಲವೋ ಅಂತವರನ್ನು ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾನೆ.
ಮತಗಟ್ಟೆ ಎಣಿಕಾ ಕೇಂದ್ರದ ಸುತ್ತ ನಿಷೇದಾಜ್ಞೆ ಹೊರಡಿಸಲಾಗಿದ್ದು, ಅಲ್ಲಿ ಮಾಸ್ಕ್ ಇಲ್ಲದೇ ನಿಂತವರನ್ನು ಎಚ್ಚರಿಸುವ ಹಾಗೂ ಹೊತ್ತೊಯ್ಯುವ ಕೆಲಸವನ್ನು ಈ ಕೊರೊನಾ ವೇಷಧಾರಿ ಮಾಡುತ್ತಿದ್ದಾನೆ.
Kshetra Samachara
30/12/2020 03:19 pm