ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಲ್ಲದಕ್ಕೂ ಪೊಲೀಸರೇ ಆಗಬೇಕಾ? ಪಾಲಿಕೆ ಸಿಬ್ಬಂದಿ ಎಲ್ಲೋದ್ರು?

ಈರಣ್ಣ ವಾಲಿಕಾರ: ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

ಹುಬ್ಬಳ್ಳಿ: ಕೊರೊನಾ 3 ನೇ ಅಲೆ, ಒಮಿಕ್ರಾನ್ ಮಹಾಮಾರಿ ಹಿನ್ನೆಲೆಯಲ್ಲಿ, ಮಾಸ್ಕ್ ಸಾಮಾಜಿಕ ಅಂತರ ಸೇರಿದಂತೆ ಹಲವು ನಿಯಮಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ, ಮಾಸ್ಕ್ ಹಾಕದವರಿಗೆ ದಂಡ ಹಾಕಲು ಪೊಲೀಸರನ್ನು ಕಣಕ್ಕಿಳಿಸಿದೆ.

ಅದರಂತೆ ಉಪ ನಗರದ ಠಾಣೆ ಪೊಲೀಸರು ಮುಂಜಾನೆಯಿಂದಲೇ ತಮ್ಮ ಕರ್ತವ್ಯದ ನಡುವೆಯೂ ಮತ್ತೆ ಜಾಗೃತಿ ಜೊತೆಗೆ ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಿದ್ದಾರೆ. ಇನ್ನೂ ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಇಲ್ಲದವರಿಗೆ ಪಾಲಿಕೆ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗುವ ಬದಲಿಗೆ, ಪೊಲೀಸರನ್ನೆ ಕಣಕ್ಕೆ ಇಳಿಸಿ ಸರ್ಕಾರ ಅವರಿಗೆ ಮತ್ತೊಂದು ಜವಾಬ್ದಾರಿ ವಹಿಸಿ ಕಿರಿಕಿರಿ ಮಾಡುತ್ತಿದೆ.

ಕಳೆದ ಲಾಕ್ ಡೌನ್ ವೇಳೆಯಲ್ಲಿ ಮಹಾನಗರ ಪಾಲಿಕೆಯು ದಂಡ ವಸೂಲಿಗಾಗಿ ಮಾರ್ಶಲ್ ಗಳನ್ನು ಕಣಕ್ಕೆ ಇಳಿಸಿದ್ದರು. ಅಷ್ಟೇ ಅಲ್ಲದೆ ಪಾಲಿಕೆಗೆ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು ಮಾಸ್ಕ್ ದಂಡ ಹಾಕಲು ಮುಂದಾಗಿದ್ದರು. ಆದರೆ ಸಾರ್ವಜನಿಕರು ಮಾರ್ಸಲ್ ಮತ್ತು ಪಾಲಿಕೆ ಸಿಬ್ಬಂದಿಗೆ ಕ್ಯಾರೇ ಎನ್ನದ ಕಾರಣ, ಈಗ ಪೊಲೀಸರೆ ತಮ್ಮ ಕರ್ತವ್ಯ ಬಿಟ್ಟು ಮಾಸ್ಕ್ ದಂಡ ಹಾಕಲು ಬರಬೇಕಾಗಿದೆ.

ನಿತ್ಯದ ನೂರೆಂಟು ಕೆಲಸಗಳೊಂದಿಗೆ ಪೊಲೀಸರಿಗೆ ಮತ್ತೊಂದು ಜವಾಬ್ದಾರಿ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದೇ ಸಾರ್ವಜನಿಕರ ಪ್ರಶ್ನೆ.

Edited By : Nagesh Gaonkar
Kshetra Samachara

Kshetra Samachara

04/01/2022 08:06 pm

Cinque Terre

49.38 K

Cinque Terre

13

ಸಂಬಂಧಿತ ಸುದ್ದಿ