ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬಸಾಪುರ ಮತ್ತು ನಲವಡಿ ಗ್ರಾಮದಲ್ಲಿ ಲಸಿಕೆ ಮೇಳ

ಅಣ್ಣಿಗೇರಿ : ತಾಲೂಕಿನ ಗ್ರಾಮಗಳಾದ ಬಸಾಪುರ ಮತ್ತು ನಲವಡಿ ಗ್ರಾಮಗಳಲ್ಲಿ ಇಂದು ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮಗಳಲ್ಲಿ ಬಾಕಿ ಉಳಿದ ಸಾರ್ವಜನಿಕರಿಗೆ ಸೆಕೆಂಡ್ ಡೋಸ್ ಲಸಿಕೆಯನ್ನು ನೀಡಿದರು.

ಇನ್ನು 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಬುಸ್ಟರ್ ಡೋಸ್ ಸಹ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಾಥಮಿಕ ಸುರಕ್ಷಾ ಅಧಿಕಾರಿ ರಶ್ಮಿ ನಾಗನೂರು, ಸಮುದಾಯ ಆರೋಗ್ಯ ಅಧಿಕಾರಿ ಪ್ರೀತಂ ಕದಡಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

13/01/2022 05:20 pm

Cinque Terre

25.97 K

Cinque Terre

0

ಸಂಬಂಧಿತ ಸುದ್ದಿ