ಕುಂದಗೋಳ : ಮೂರನೇ ಅಲೆ ಮುಂಜಾಗ್ರತೆಗೆ ಹಾಗೂ ಮಕ್ಕಳ ಆರೋಗ್ಯ ಶೈಕ್ಷಣಿಕ ಚಟುವಟಿಕೆಗಳ ದೃಷ್ಟಿಯಿಂದ ಶಾಲಾ ಮಕ್ಕಳಿಗೂ ನೀಡಲಾಗುತ್ತಿರುವ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮವನ್ನು ಕುಂದಗೋಳ ಪಟ್ಟಣದ ಹರಭಟ್ಟ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಆರಂಭಿಸಲಾಯಿತು.
ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಂದಗೋಳ ತಾಲೂಕಿನ ಯಾವ ಸ್ಥಳಗಳಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ, ಈ ಬಗ್ಗೆ ಪಾಲಕರ ಅಭಿಪ್ರಾಯ ಏನು ಎಂಬುದನ್ನು ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡರು.
ಈ ವೇಳೆ ಮಕ್ಕಳು ಉತ್ಸಾಹದಿಂದ ತಮ್ಮ ಆಧಾರ್ ಕಾರ್ಡ್ ಹಿಡಿದು ನೋಂದಣಿ ಮಾಡಿಸುತ್ತಾ ಸರದಿ ಸಾಲಿನಲ್ಲಿ ಬಂದು ಲಸಿಕೆ ಪಡೆಯಲು ಮುಂದಾದರೂ, ಇನ್ನೂ ಕೆಲ ವಿದ್ಯಾರ್ಥಿನಿಯರು ಪಾಲಕರ ಮೊಬೈಲ್ ಪಡೆದು ಶಾಸಕಿ ಕುಸುಮಾವತಿ ಶಿವಳ್ಳಿ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸ ಪಟ್ಟರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರು ತಾವೇ ಕಲಿತ ಶಾಲೆಯಲ್ಲಿ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ವ್ಯಾಕ್ಸಿನ್ ಮಹತ್ವ ತಿಳಿಸಿಕೊಟ್ಟರು.
ಒಟ್ಟಾರೆ ಇಂದು ಕೊರೊನಾ ಮೂರನೇ ಅಲೆ ಮುಂಜಾಗ್ರತೆಗೆ ಶಾಲಾ ಮಕ್ಕಳ ಸುರಕ್ಷತೆಯ ಲಸಿಕೆಗೆ ಪಾಲಕರು ಸಹ ಸಹಮತ ವ್ಯಕ್ತಪಡಿಸಿದ್ದಾರೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
03/01/2022 02:47 pm