ಕುಂದಗೋಳ : ಪ್ರಸಕ್ತ ವರ್ಷದ ಪಿಯುಸಿ ಪಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಯರಗುಪ್ಪಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶ್ರೀಗಳಿಂದ ಸನ್ಮಾನ ನೇರವೆರಿದೆ.
ಹೌದು ! ಕುಂದಗೋಳ ತಾಲೂಕಿನ ಯರಗುಪ್ಪಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವೀತಿಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಮುಳಹಳ್ಳಿ ಗ್ರಾಮದ ವಿದ್ಯಾರ್ಥಿನಿ ಚೈತ್ರಾ ಅಂಗಡಿ, ದ್ವಿತೀಯ ಸ್ಥಾನ ಪಡೆದ ಕಾವ್ಯ ಭೀಮಣ್ಣವರ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪರಮಪೂಜ್ಯ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳು ಸನ್ಮಾನಿಸಿದರು.
ಬಳಿಕ ಮಾತನಾಡಿದ ಪರಮ ಪೂಜ್ಯ ಶ್ರೀಗಳು ಮಹಾರಾಜ ತನ್ನ ರಾಜ್ಯದಲ್ಲಿ ಮಾತ್ರ ಗೌರವಿಸಲ್ಪಡುತ್ತಾನೆ, ಒಬ್ಬ ವಿದ್ಯಾವಂತ ದೇಶ ವಿದೇಶಗಳಲ್ಲಿ ಗೌರವಿಸಲ್ಪಡುತ್ತಾನೆ ಎಂದು ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಮುಖಂಡರು ಕಾಲೇಜು ಆಡಳಿತ ಮಂಡಳಿ ಪ್ರಾಂಶುಪಾಲರು ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
30/06/2022 01:23 pm