ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ನವ ನವೀನ ವಿಜ್ಞಾನ ಪ್ರಾತ್ಯಕ್ಷಿಕೆಗಳ ಅನಾವರಣ

ಧಾರವಾಡ : ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಕೈಯಲ್ಲಿ ಆವಿಷ್ಕಾರಗೊಂಡ ವಿಜ್ಞಾನದ ವಿವಿಧ ವಸ್ತುಗಳು.. ಅವುಗಳ ಬಗ್ಗೆ ಹೀಗೆ ವಿವರಣೆ ನೀಡುತ್ತಿರುವ ವಿದ್ಯಾರ್ಥಿಗಳು.. ವಿಜ್ಞಾನದ ವಿವಿಧ ಆವಿಷ್ಕಾರಗಳನ್ನು ಕಂಡು ಆಶ್ಚರ್ಯಚಕಿತರಾಗುತ್ತಿರುವ ಇತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು.

ಈ ಎಲ್ಲ ದೃಶ್ಯಗಳು ಕಂಡು ಬಂದದ್ದು ಧಾರವಾಡದ ಶ್ರೀಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ.

ಪ್ರತಿವರ್ಷ ಶ್ರೀಸಾಯಿ ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಸ್ಮಯ ಎಂಬ ವಿಜ್ಞಾನದ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ಪ್ರಸಕ್ತ ವರ್ಷ ಕೂಡ ಶ್ರೀಸಾಯಿ ಕಾಲೇಜು ವಿಜ್ಞಾನ ವಿಸ್ಮಯ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು.

ಧಾರವಾಡದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿದ ಕೃಷಿ ಯಂತ್ರೋಪಕರಣ, ರೋವರ್, ನೀರು ಶುದ್ಧೀಕರಿಸುವ ವಿಧಾನ, ಸೌರಶಕ್ತಿ ಸಾಧನ ಸೇರಿದಂತೆ ಇತರ ವಿಜ್ಞಾನ ಪ್ರಾತ್ಯಕ್ಷಿಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಅಲ್ಲದೇ ಈ ವಿಜ್ಞಾನ ವಿಸ್ಮಯ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ಹರ್ಷ ಕೂಡ ವ್ಯಕ್ತಪಡಿಸಿದರು.

ಈ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮ ಪ್ರಾತ್ಯಕ್ಷಿಕೆಗಳನ್ನು ಆಯ್ಕೆ ಮಾಡಿ ಅವರಿಗೆ ಯುವ ವಿಜ್ಞಾನಿ ಎಂಬ ಪ್ರಶಸ್ತಿ ಕೂಡ ನೀಡಲಾಯಿತು.

ಒಟ್ಟಾರೆ ಶ್ರೀಸಾಯಿ ಕಾಲೇಜು ಏರ್ಪಡಿಸಿದ್ದ ವಿಜ್ಞಾನ ವಿಸ್ಮಯ ಎಂಬ ಈ ಕಾರ್ಯಕ್ರಮ ಅನೇಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದಂತೂ ಸುಳ್ಳಲ್ಲ.

Edited By : Manjunath H D
Kshetra Samachara

Kshetra Samachara

09/12/2024 08:31 pm

Cinque Terre

22.57 K

Cinque Terre

0

ಸಂಬಂಧಿತ ಸುದ್ದಿ