ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಮದುವನಗಿತ್ತಿಯಂತೆ ಸಿಂಗಾರಗೊಂಡ ಶಿವನಗರ ಶಾಲೆ !

ಅಳ್ನಾವರ: ಬೇಸಿಗೆ ರಜೆ ಮುಗಿಸಿ ನಿನ್ನೆಯಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿವೆ.ಇದರ ಬೆನ್ನಲ್ಲೆ ಅಳ್ನಾವರ ತಾಲೂಕಿನ ಕಟ್ಟ ಕಡೆಯ ಗ್ರಾಮ ಶಿವನಗರದ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

ಶಿವನಗರ ಗ್ರಾಮ ಹಿಂದುಳಿದ,ಗೌಳಿ ಜನಾಂಗ ದಿಂದ ಕೂಡಿದ ಚಿಕ್ಕ ಗ್ರಾಮ.ಕಳೆದ ತಿಂಗಳು ಸುರಿದ ಅಕಾಲಿಕ ಮಳೆಗೆ ಗಿಡ ಮರಗಳೆಲ್ಲ ನೆಲಕ್ಕೆ ಉರುಳಿ ಶಾಲೆ ಸೇರಿದಂತೆ ಮನೆ,ದೇವಸ್ಥಾನದ ಗೋಡೆ ಗಳೆಲ್ಲವು ಹಾಳಾಗಿದ್ದವು.ಆ ಎಲ್ಲ ಕಹಿ ಘಟನೆಗಳನ್ನ ಮರೆತು ಮಕ್ಕಳು ಶಾಲೆಗೆ ಮರಳಿದ್ದು ಅತ್ಯಂತ ಖುಷಿ ತಂದಿದೆ ಎಂದು ಹೊನ್ನಾಪುರ ಗ್ರಾ,ಪಂ ಸದಸ್ಯ ಸಂತೋಷ ಕಲಾಜ ಅವರ ಅಭಿಪ್ರಾಯ.

ಶಿವನಗರ ಶಾಲೆಯ ಮಕ್ಕಳೆಲ್ಲ ಸೇರಿ ಶಾಲೆಯನ್ನ ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಅತ್ಯಂತ ಸಂತಸದಿಂದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಮಹಾಂತೇಶ ಪಠಾಣಿ

ಪಬ್ಲಿಕ್ ನೆಕ್ಸ್ಟ್

ಅಳ್ನಾವರ

Edited By :
Kshetra Samachara

Kshetra Samachara

17/05/2022 08:35 am

Cinque Terre

21.35 K

Cinque Terre

0

ಸಂಬಂಧಿತ ಸುದ್ದಿ