ಧಾರವಾಡ: ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸಂಲಗ್ನ ಸಂಸ್ಥೆ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವು ಡಯಟ್ ಸಹಯೋಗದಲ್ಲಿ ಹಮ್ಮಿಕೊಳ್ಳುತ್ತಿರುವ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ ಕುರಿತು ಪೂರಕ ಚರ್ಚೆ ನಡೆಸಲು ಡಿಸೆಂಬರ್ 11ರಂದು (ಶನಿವಾರ) ಮುಂಜಾನೆ 10 ಗಂಟೆಗೆ ಪ್ರತಿಷ್ಠಾನದ ಕಚೇರಿಯಲ್ಲಿ ಜಿಲ್ಲೆಯೊಳಗಿನ ಆಸಕ್ತ ಶಿಕ್ಷಕ-ಶಿಕ್ಷಕಿಯರ ಪೂರ್ವಭಾವಿ ಸಭೆ ಕರೆಯಲಾಗಿದೆ.
ಜನವರಿ-2022ರಲ್ಲಿ 27ನೇ ವರ್ಷದ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ ನಡೆಸಲು ನಿರ್ಧರಿಸಲಾಗಿದ್ದು, ಆಸಕ್ತ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಶಾಲೆಯ ವತಿಯಿಂದ ಪ್ರದರ್ಶನಗೊಳ್ಳುವ ಪಠ್ಯಾಧಾರಿತ ಮಕ್ಕಳ ನಾಟಕದ ಕುರಿತು ವಿವರಗಳನ್ನು ಹಂಚಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಾಟಕೋತ್ಸವದ ಸಂಯೋಜಕ ಕೆ.ಎಚ್.ನಾಯಕ (ಮೊ. 9035530257) ಅಥವಾ ಪ್ರತಿಷ್ಠಾನದ ಸಹಾಯಕ ನಿರ್ದೇಶಕ ಶಂಕರ ಗಂಗಣ್ಣವರ (ಮೊ.9844141025) ಸಂಪರ್ಕಿಸಬೇಕೆಂದು ಪ್ರತಿಷ್ಠಾನದ ಗೌರವ ನಿರ್ದೇಶಕ ನಿವೃತ್ತ ಡಿಡಿಪಿಐ ಎಸ್.ಬಿ.ಕೊಡ್ಲಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
04/12/2021 09:46 pm