ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ವಿದ್ಯಾರ್ಥಿಗಳ ಗುರಿ ಸಾಧನೆಯೇ ಗ್ಲೋಬಲ್ ಕಾಲೇಜಿನ ಧ್ಯೇಯೋದ್ದೇಶ'

ಹುಬ್ಬಳ್ಳಿ: ಆಧುನಿಕ ತಂತ್ರಜ್ಞಾನ ಹಾಗೂ ಉತ್ಕೃಷ್ಟ ಗುಣಮಟ್ಟದ ಶೈಕ್ಷಣಿಕ ಕೌಶಲ್ಯಗಳೊಂದಿಗೆ ವಾಣಿಜ್ಯನಗರಿ ಹುಬ್ಬಳ್ಳಿಯ ಗ್ಲೋಬಲ್ ಎಜುಕೇಶನ್ ಫೌಂಡೇಶನ್ ವಿದ್ಯಾರ್ಥಿಗಳಿಗಾಗಿ ಹಲವಾರು ಕೋರ್ಸ್ ಗಳನ್ನು ಪರಿಚಯಿಸುತ್ತಿದೆ.

ಹೌದು. ಎನ್.ಬಿ.ಹಿರೇಮಠ ಅವರು ಸ್ಥಾಪನೆ ಮಾಡಿರುವ ಗ್ಲೋಬಲ್ ಎಜುಕೇಶನ್ ಫೌಂಡೇಶನ್ ಬಿಬಿಎ, ಬಿಸಿಎ, ಬಿ.ಕಾಂ, ಪಿಯುಸಿ ವಾಣಿಜ್ಯ ಹಾಗೂ ಪಿಯುಸಿ ವಿಜ್ಞಾನ ವಿಭಾಗಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ.

ಭವ್ಯವಾದ ಕಟ್ಟಡವನ್ನು ಹೊಂದಿರುವ ಗ್ಲೋಬಲ್ ಕಾಲೇಜು ಅತ್ಯುತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಅಲ್ಲದೇ ಆಧುನಿಕ ಶೈಲಿಯ ಕ್ಲಾಸ್ ರೂಮ್, ಭವ್ಯವಾದ ಗ್ರಂಥಾಲಯ, ಹೈ ಟೆಕ್ನಾಲಜಿ ಲ್ಯಾಬ್‌ಗಳಿಂದ ಗ್ಲೋಬಲ್ ಕಾಲೇಜು ವಿದ್ಯಾರ್ಥಿಗಳ ಕಲಿಕಾ ಉತ್ಸಾಹವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ.

ಇನ್ನೂ ಕಾಲೇಜಿನ ಡೀನ್ ಮಹೇಶ ದೇಶಪಾಂಡೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯನ್ನು ಕೂಡ ಮಾಡಲಾಗುತ್ತದೆ.

ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಹಾಗೂ ಧಾರವಾಡ ಜಿಲ್ಲೆಯ ಉದಯೋನ್ಮುಖ ಪ್ರತಿಭೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀರೆರೆದು ಪ್ರೋತ್ಸಾಹಿಸಿ ಉಜ್ವಲ ಭವಿಷ್ಯದ ಸಾಕಾರತೆಗೆ ಗ್ಲೋಬಲ್ ಕಾಲೇಜು ಶ್ರಮಿಸುತ್ತಿದೆ.

Edited By : Vijay Kumar
Kshetra Samachara

Kshetra Samachara

06/08/2021 12:39 pm

Cinque Terre

9.4 K

Cinque Terre

0

ಸಂಬಂಧಿತ ಸುದ್ದಿ