ಅಣ್ಣಿಗೇರಿ :ಕೋವಿಡ್ - 19 ಸೋಂಕು ಇಳಿಮುಖವಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಜನೆವರಿ 1 ರಿಂದ ಶಾಲೆಗಳು ವಿದ್ಯಾಗಮ -2 ರ ಮೂಲಕ ಪ್ರಾರಂಭವಾಗಿವೆ. ಮಕ್ಕಳ ಕಲಿಕೆಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ " ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಅವರು ಹೇಳಿದರು.
ಇಂದು ಸ್ಥಳೀಯ ಕೆಜಿಎಸ್ ಶಾಲೆಯಲ್ಲಿ ನಡೆದ ಬಿ.ಆರ್.ಪಿ. ಮತ್ತು ಸಿ.ಆರ್.ಪಿ.ಗಳ ಸಭೆಯಲ್ಲಿ ಮಾತನಾಡಿದ ಅವರು ಎಸ್.ಎಸ್.ಎಲ್.ಸಿ. ತರಗತಿಗಳು ಮತ್ತು ೬ ರಿಂದ ೯ ನೆಯ ತರಗತಿಗಳ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭವಾಗಿರುವುದರಿಂದ ಎಲ್ಲ ಶಾಲೆಗಳಲ್ಲಿ SOP - Standard Operative Procedure ( ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ ) ಸಮರ್ಪಕವಾದ ಅನುಷ್ಠಾನಕ್ಕೆ ಎಲ್ಲ ಬಿ.ಆರ್.ಪಿ. ಮತ್ತು ಸಿ.ಆರ್.ಪಿ.ಗಳು ಸೂಕ್ತ ಕ್ರಮಗಳನ್ನು ಅನುಸರಿಸಲು ಎಲ್ಲ ಶಾಲಾ ಮುಖ್ಯಸ್ಥರಿಗೆ ತಿಳಿಸಬೇಕಾಗಿದೆ ಎಂದರು. ಜನೆವರಿ ತಿಂಗಳ ಚಟುವಟಿಕೆಗಳನ್ನು ನಮ್ಮ ಶಿಕ್ಷಕರು ಸೂಕ್ತ ವೇಳಾಪಟ್ಟಿಯೊಂದಿಗೆ ನೀಡಬೇಕಾಗಿದೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಉತ್ತಮ ಶಾಲಾ ವಾತಾವರಣ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡುವ ಅವಕಾಶಗಳು ಇರುವುದರಿಂದ ಎಲ್ಲರೂ ಅದಕ್ಕಾಗಿ ಶ್ರಮಿಸೋಣ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಆರ್.ಎಂ.ಎಸ್.ಎ.ಉರ್ದು ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರ ಕೊರತೆ ಇರುವ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡುವುದಾಗಿ ಹೇಳಿದರು.
Kshetra Samachara
19/01/2021 09:46 pm