ಪಬ್ಲಿಕ್ ನೆಕ್ಸ್ಟ್ ವಿಶೇಷ, ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ : ಲಾಕ್ಡೌನ್ ಪರಿಣಾಮವಾಗಿ ಶೈಕ್ಷಣಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಿದೆ,ಅದರಲ್ಲಿಯೂ ಸರ್ಕಾರಿ ಶಾಲೆಗಳ ಮಕ್ಕಳು ಕಲಿಕೆಯ ಚಟುವಟಿಕೆಗಳಿಂದ ದೂರವೇ ಉಳಿಯ ಬೇಕಾದ ಸನ್ನಿವೇಶದಲ್ಲಿ ಕಲಿಕೆಯ ನಿರಂತರತೆಗೆ ವಿದ್ಯಾಗಮ ಪೂರಕವಾಗಿದೆ.
ಹೌದು, ಅಂದು ಕೊಂಡಂತೆ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪ್ರಾರಂಭವಾಗಿದ್ದರೆ,ಮಕ್ಕಳು ಅರ್ಧವಾರ್ಷಿಕ ಪರೀಕ್ಷೆಯಲ್ಲಿ ತಯಾರಿಯಲ್ಲಿ ತೊಡಗುತ್ತಿದ್ದರು,ಕರೋನಾ ಮಾರಿ ಇದಕ್ಕೆಲ್ಲಾ ಅವಕಾಶ ನೀಡದೆ ಮಕ್ಕಳು ಐದಾರು ತಿಂಗಳು ಮನೆಯಲ್ಲಿಯೇ ಉಳಿಯುವಂತಾಗಿದೆ.
ಮಕ್ಕಳ ದೀರ್ಘ ಕಲಿಕಾ ಅಂತರ ಒಳಿತಲ್ಲ,ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕು.ಒಂದಿಲ್ಲೊಂದು ವಿಧಾನದ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ, ಸದ್ದುದ್ದೇಶದಿಂದ ಶಿಕ್ಷಣ ಇಲಾಖೆ ಜಾರಿಗೆ ತಂದ ಯೋಜನೆ ವಿದ್ಯಾಗಮ ಶಿಕ್ಷಣ ಪದ್ದತಿಯಲ್ಲಿ ಹೊಸ ಆಶಾಕಿರಣವಾಗಿದೆ.
ಮೊಬೈಲ್, ವಾಟ್ಸಆಪ್ ಗುಂಪು ರಚಿಸಿ ಮಕ್ಕಳ, ಜೊತೆಗೆ ಶಿಕ್ಷಕರು ಸಂಪರ್ಕ ಸಾಧಿಸಿ ಕಲಿಕೆಯ ವಾತಾವರಣ ಸೃಷ್ಟಿಸಲಾಗಿದೆ.
ವಿದ್ಯಾಗಮ ಯೋಜನೆಯಲ್ಲಿ ವಠಾರ ಯೊಜನೆ ತುಂಬಾ ಯಶಸ್ವಿಯಾಗಿದೆ ಎನ್ನುತ್ತಾರೆ ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಉಮಾದೇವಿ ಬಸಾಪೂರ.
ತಾಲೂಕಿನಲ್ಲಿ ಒಟ್ಟು 25816 ಮಕ್ಕಳಿಗೆ 859 ಶಿಕ್ಷಕರ ಮಾರ್ಗದರ್ಶನದಲ್ಲಿ 6494 ವಠಾರ ಶಾಲೆಗಳು ನಡೆಯುತ್ತಿವೆ.ಪ್ರದೇಶವಾರು ಮಕ್ಕಳ ಗುಂಪುಗಳನ್ನಾಗಿ ವಿಂಗಡಿಸಿ ಮಾರ್ಗದರ್ಶಿ ಶಿಕ್ಷಕರು ಮಕ್ಕಳು ಬಳಿ ಹೋಗಿ ಸಮುದಾಯ ಭವನ ದೇವಸ್ಥಾನಗಳಗಲ್ಲಿ ಮಕ್ಕಳನ್ನು ಸಾಮಾಜಿಕ ಅಂತರದೊಂದಿಗೆ ಕಲಿಕಾ ಕ್ರಿಯೆಯಲ್ಲಿ ತೊಡಗಿಸಿ ವಿದ್ಯಾಗಮ ಕಲಿಕಾ ಕೊರತೆಯನ್ನು ನಿಗಿಸಿದೆ.
ಪಾಲಕರ,ಮಕ್ಕಳ ಆಸಕ್ತಿ ಹಾಗೂ ಶಿಕ್ಷಕರ ಶ್ರಮದಿಂದ ಜಿಲ್ಲೆಯಲ್ಲಿಯೆ ಶೈಕ್ಷಣಿಕ ಅಭಿವೃದ್ದಿಯದ್ದಿಯತ್ತ ದಾಪುಗಾಲು ಇಡುತ್ತಿರುವುದು ಖುಷಿ ತಂದ ವಿಷಯವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಹಾಗೂ ವಿದ್ಯಾಗಮ ನೋಡಲ್ ಅಧಿಕಾರಿ ಪುಟ್ಟಪ್ಪ ಭಜಂತ್ರಿ ಅಭಿಪ್ರಾಯ ಹಂಚಿಕೊಂಡರು.
ಶಾಲಾ ಮಾಸ್ತರರು ನಮ್ಮೂರಿಗೆ ಬಂದು ಪಾಠ ಹೇಳ್ತಾರಿ,ಇದರಿಂದ ಮಕ್ಕಳು ಓದಕಾ ಬರಿಯಾಕ ಶುರು ಮಾಡ್ಯಾರಿ ಎನ್ನುತ್ತಾರೆ ಕಂದ್ಲಿ ಗ್ರಾಮದ ಪಾಲಕರಾದ ಯಲ್ಲವ್ವ ಬಾಬರಿ, ಒಟ್ಟಾರೆ ವಿದ್ಯಾಗಮ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
Kshetra Samachara
30/09/2020 10:59 am