ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸೇವಾ ಭದ್ರತೆಗೆ ಆಗ್ರಹಿಸಿ ಡಿ.11 ರಿಂದ ಅತಿಥಿ ಉಪನ್ಯಾಸಕರ ಧರಣಿ

ಧಾರವಾಡ : ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸೇವಾ ಭದ್ರತೆ ಹಾಗೂ 2020-21 ನೇ ಸಾಲಿಗೆ ಸೇವಾವಧಿಯ ಮುಂದುವರೆಸಿ,ಶೀಘ್ರವಾಗಿ ಆದೇಶ ಹೊರಡಿಸಬೇಕು,ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.11 ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಪ್ರೊ.ಹನುಮಂತಗೌಡ ಆರ್ ಕಲ್ಮನಿ ಹೇಳಿದರು‌.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಕಳೆದ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ಗೌರವ ಹೆಚ್ಚಳ ಮಾಡಿ, 2019-20ರಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನೇ ಪ್ರಸಕ್ತ ಸಾಲಿಗೆ ತಕ್ಷಣವೇ ಮುಂದುವರಿಸಬೇಕು.ಈ ಕೋವಿಡ್ ವರ್ಷವನ್ನು ಸೇವಾವಧಿಯನ್ನಾಗಿ ಪರಿಗಣಿಸುವಂತೆ ಆದೇಶ ಹೊರಡಿಸಬೇಕು ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೋ. ಶಿವಾನಂದ ಕಲ್ಲೂರು ಮಾತನಾಡಿ, ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರಿಕೆಗಾಗಿಯೇ ಈ ಧರಣಿ ನಿರಂತರವಾಗಿ ನಡೆಯಲಿದೆ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂಪಡೆಯಲ್ಲ. ಧರಣಿಯಲ್ಲಿ ವಿವಿಧ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವೇಳೆ ಪ್ರೋ.ಸಿ.ಎಸ್.ಪಾಟೀಲ, ಪ್ರೋ. ಸಂಜು ಸತರೆಡ್ಡಿ, ಪ್ರೋ.ವೈ.ಜಿ.ಹಂಚನಾಳ ಇತರರು ಇದ್ದರು.

Edited By : Manjunath H D
Kshetra Samachara

Kshetra Samachara

09/12/2020 03:19 pm

Cinque Terre

15.45 K

Cinque Terre

2

ಸಂಬಂಧಿತ ಸುದ್ದಿ