ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಲಾಕ್ ಡೌನ್ ಎಫೆಕ್ಟ್ : ನಿರುದ್ಯೋಗದಿಂದ ಮುಕ್ತವಾದ ಉದ್ಯೋಗ ವಿನಿಮಯ ಕೇಂದ್ರ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ

ಹುಬ್ಬಳ್ಳಿ - ಕೊರೊನಾ ಲಾಕ್ ಡೌನ್ ನಿಂದಾಗಿ, ಸಾಮಾನ್ಯವಾಗಿ ಎಲ್ಲ ಕೆಲಸಗಳು ಸ್ಥಗಿತಗೊಂಡಿದ್ದು, ಆರ್ಥಿಕತೆ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಕೈಗಾರಿಕೆಗಳು ಬಾಗಿಲು ಹಾಕಿದ್ದು, ಸಾಕಷ್ಟು ಜನರು ಉದ್ಯೋಗ ‌ಕಳೆದುಕೊಂಡು‌ ಬೀದಿಗೆ ಬಂದಿದ್ದು, ಮತ್ತೊಂದು ‌ಉದ್ಯೋಗ ಶೋಧದತ್ತ ಮುಖ ಮಾಡಿದ್ದಾರೆ.

ನಗರ ಪ್ರದೇಶಗಳಲ್ಲಿ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ, ಯುವಕರಿಗೆ ಉದ್ಯೋಗ ವಂಚಿತರು‌ ಹಾಗೂ ನಿರುದ್ಯೋಗಿಗಳಿಗೆ ನೆರವು ನೀಡುವ ಉದ್ದೇಶದಿಂದ, ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲಾಗಿದ್ದು, ಈ‌ ಕೇಂದ್ರಗಳಿಗೆ ಈ‌ ಬಾರಿ ಬೇಡಿಕೆ ಬಂದಿದೆ.‌ ಈಗ ಯುವಕ‌ ಯುವತಿಯರು ಇದೀಗ ಹೊಸ ಕಂಪನಿಗಳಲ್ಲಿ, ಉದ್ಯೋಗ ಹುಡುಕಲು ಉದ್ಯೋಗ ವಿನಿಮಯ ‌ಕೇಂದ್ರಗಳಲ್ಲಿ‌ ಹೆಸರು ನೋಂದಾಯಿಸುತ್ತಿದ್ದಾರೆ...

ಲಾಕ್ ಡೌನ್ ಸಡಿಲಿಕೆ ನಂತರ ದಿನಗಳಲ್ಲಿ, ಸಾಕಷ್ಟು ಉದ್ಯೋಗ ಕಡಿತವಾಗಿ, ಮನೆ ನಿರ್ವಹಣೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಜನರು ಬಂದಿದ್ದಾರೆ. ಹೀಗಾಗಿ‌‌ ಜನರಿಗೆ ಕೆಲಸ‌ ಅನಿವಾರ್ಯತೆ ಎದುರಾಗಿದ್ದು, ಈಗ ನಿತ್ಯ 10-15 ಜನರು ಉದ್ಯೋಗ ಆಕಾಂಕ್ಷಿಗಳು ಆಗಮಿಸುತ್ತಿದ್ದಾರೆ. ಇನ್ನು ಕಂಪನಿಗಳಲ್ಲಿ 50 ವರ್ಷ ‌ಮೇಲ್ಪಟ್ಟವರನ್ನು ಕೆಲಸದಿಂದ ಕೈ ಬಿಡಲಾಗಿದೆ. ಹೀಗಾಗಿ‌ ಸಾಕಷ್ಟು ‌ಜನ ನಿರುದ್ಯೋಗ ಸಮಸ್ಯೆ ‌ತಲೆದೋರಿದ್ದು, ಸಾಮಾನ್ಯವಾಗಿ ಎಲ್ಲರೂ‌ ಉದ್ಯೋಗ ವಿನಿಮಯ ‌ಕೇಂದ್ರಗಳ ಮೊರೆ ಹೋಗಿದ್ದಾರೆ.

ಐಟಿ‌- ಬಿಟಿ ಯಿಂದ ಹಿಡಿದು, ಪಿಯುಸಿ ಮುಗಿಸಿದ ನಿರುದ್ಯೋಗಿಗಳಿಗೆ ಅರ್ಹತೆಗೆ ತಕ್ಕಂತೆ ಕಂಪನಿ ಹಾಗೂ ಕಚೇರಿಗಳಲ್ಲಿ ಕೆಲಸ ಕೊಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.‌...

ಒಟ್ಟಿನಲ್ಲಿ ಕೊರೊನಾದಿಂದಾಗಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡು. ಉದ್ಯೋಗಕ್ಕೆ ಅಲೆದಾಡುವಂತಾಗಿದ್ದು, ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.......!

Edited By : Nagesh Gaonkar
Kshetra Samachara

Kshetra Samachara

29/10/2020 01:25 pm

Cinque Terre

39.05 K

Cinque Terre

25

ಸಂಬಂಧಿತ ಸುದ್ದಿ