1.
ಹುಬ್ಬಳ್ಳಿಯಲ್ಲಿ ಹೆಚ್ಚಾದ ಮೊಬೈಲ್ ಕಳ್ಳತನ !
ಹುಬ್ಬಳ್ಳಿಯಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಬಸ್ ಗಾಗಿ ಕಾದಿರೋರನ್ನೆ ಇವರು ಟಾರ್ಗೆಟ್ ಮಾಡ್ತಿದ್ದಾರೆ. ನಗರದ ಸಾಯಿಬಾಬ ನಗರದಲ್ಲಿ ಶಿಕ್ಷಕ ಗುರುಪಾದಪ್ಪ ಅವರ ಮೊಬೈಲ್ ಕದಿದ್ದಾರೆ. ದೂರು ನೀಡಿದರು ಪೊಲೀಸರು ಕ್ಯಾರೆ ಅಂತಿಲ್ವಂತೆ.
https://publicnext.com/article/nid/Hubballi-Dharwad/Crime/node=633148
======
2.
ಕೊನೆಗೂ ಬುದಕಿ ಉಳಿಯಲಿಲ್ಲ ಪ್ರೇಮಿಗಳು !
ನವಲಗುಂದದ ಪ್ರೇಮಿಗಳು ವಿಷ ಸೇವಿಸಿ ನಿನ್ನೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಹುಬ್ಬಳ್ಳಿಯ ಕಿಮ್ಸ್ ನಲ್ಲೂ ಇವರನ್ನ ದಾಖಲಿಸಲಾಗಿತ್ತು. ಆದರೆ ನಿನ್ನೆ ಪ್ರೇಯಸಿ ಮೃತಟ್ಟರೇ, ಇಂದು ಪ್ರೇಮಿ ಮೃತಪಟ್ಟಿದ್ದಾನೆ. ತಾಲೂಕಿನ ತಡಹಾಳ ಗ್ರಾಮದಲ್ಲಿ ಪ್ರೇಮಿಗಳು ವಿಷ ಸೇವಿಸಿದ್ದರು.
https://publicnext.com/article/nid/Hubballi-Dharwad/Accident/node=633082
======
3.
ಮಗನ ಕಣ್ಣು ದಾನ ಮಾಡಿ ಮಾದರಿಯಾದ ಪೋಷಕರು !
ಹುಬ್ಬಳ್ಳಿಯ ನಿವಾಸಿಗಳಾದ ಜಗದೀಶ್ ಸಿಂಗ್ ಹಾಗೂ ಕಾವ್ಯ ದಂಪತಿ ತಮ್ಮ ಪುಟ್ಟ ಮಗನ ಕಣ್ಣು ದಾನ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಾರೆ. ತೀವ್ರ ಜ್ವರದಿಂದ ಇವರ ಆರು ವರ್ಷದ ಪುತ್ರ ಆರ್ಯನ್ ಆಸ್ಪತ್ರೆಗೆ ದಾಖಲಾಗಿದ್ದ.ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆಗ ಈ ತಂದೆ-ತಾಯಿ ಮಗನ ಕಣ್ಣು ದಾನ ಮಾಡುವ ನಿರ್ಧಾರ ಮಾಡಿದ್ದಾರೆ.ಈಗ ಎಸ್.ಡಿ.ಎಂ.ಆಸ್ಪತ್ರೆಯ ವೈದ್ಯರು ಈ ಪುಟ್ಟ ಹುಡುಗನ ಕಣ್ಣು ಸಂಗ್ರಹಿಸಿದ್ದಾರೆ.
https://publicnext.com/article/nid/Hubballi-Dharwad/Health-and-Fitness/Human-Stories/node=633251
=======
4.
ಕುಮಾರ್ ಸ್ವಾಮಿ ಅವರೇ ತಾಕತ್ತಿದ್ದರೇ ಬನ್ನಿ !
ಕುಮಾರ್ ಸ್ವಾಮಿ ಅವರೇ ತಾಕತ್ತು ಇದ್ದರೇ ನೇರಾ ನೇರವಾಗಿ ಚರ್ಚೆಗೆ ಬನ್ನಿ ಎಂದು ಶ್ರೀ ರಾಮ್ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಇಂದು ಧಾರವಾಡದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರ್ ಸ್ವಾಮಿಗೆ ಸವಾಲ್ ಹಾಕಿದ್ದಾರೆ. ಹಿಂದೂ ಸಂಘಟನೆಗಳ ಬಗ್ಗೆ ಕುಮಾರ್ ಸ್ವಾಮಿ ಕೊಟ್ಟ ಹೇಳಿಕೆ ಹಿನ್ನೆಲೆಯಲ್ಲಿಯೇ ಮುತಾಲಿಕ್ ಹೀಗೆ ಕೆಂಡಾಮಂಡಲವಾಗಿದ್ದಾರೆ.
https://publicnext.com/article/nid/Hubballi-Dharwad/Politics/Religion/node=633363
=======
5.
ಹುಬ್ಬಳ್ಳಿ ಎಪಿಎಂಸಿಯಲ್ಲಿ ಹೆಚ್ಚಾದ ಕಳ್ಳರ ಹಾವಳಿ !
ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕೇವಲ ಒಂದೇ ವಾರದಲ್ಲಿ ನಾಲ್ಕೈದು ಅಂಗಡಿ ಕಳ್ಳತನವಾಗಿದೆ. ಇದರಿಂದ ವ್ಯಾಪಾಸ್ಥರು ಕಂಗಾಲಾಗಿದ್ದಾರೆ. ಕಷ್ಟಪಟ್ಟು ದುಡಿದ ಹಣ ಮತ್ತು ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಕಳ್ಳತನವಾಗಿವೆ. ಇದರಿಂದ ವ್ಯಾಪಾರಸ್ಥರು ಬೇಸರಗೊಂಡಿದ್ದಾರೆ. ಎಪಿಎಂಸಿ-ನವನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವ್ಯಾಪಾರಸ್ಥರ ಜೊತೆಗೆ ಸಭೆ ನಡೆಸಿ ಕಳ್ಳತನ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ್ದಾರೆ.
https://publicnext.com/article/nid/Hubballi-Dharwad/Crime/node=632918
=======
6.
ಭಾರತಾಂಬೆ ಪುತ್ರನಿಗೆ ಭವ್ಯ ಸ್ವಾಗತ
ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಯೋಧ ಶಿವಪ್ಪ ವಿಠಲಾಪೂರ್ 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಈಗ ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಭಾರತಾಂಬೆಯ ಸೇವೆ ಸಲ್ಲಿಸಿದ ಈ ವೀರ ಯೋಧನಿಗೆ ಗ್ರಾಮದ ಜನತೆ ಭವ್ಯವಾದ ಸ್ವಾಗತ ಕೋರಿದ್ದಾರೆ.
https://publicnext.com/article/nid/Hubballi-Dharwad/Human-Stories/node=633002
=======
7.
ಆಟೋದವರು ಆಡಿದ್ದೇ ಆಟ ಹೇಳಿದ್ದೇ ಚಾರ್ಜು !
ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ದರ ನಿಗದಿ ಆಗಿಯೇ ಇಲ್ಲ. ಇದರಿಂದ ಆಟೋದವರು ಹೇಳಿದ್ದೇ ಆಟೋ ಚಾರ್ಜ್ ಆಗಿದೆ. ಇದರಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆರ್‌ಟಿಓ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಲೇ ಇಷ್ಟೆಲ್ಲ ತೊಂದರೆ ಆಗುತ್ತಿದೆ ಅಂತಲೇ ಜನ ಸಾಮಾನ್ಯರು ದೂರುತ್ತಿದ್ದಾರೆ.
https://publicnext.com/article/nid/Hubballi-Dharwad/Infrastructure/Business/Government/node=633026
======
8.
ನಮಗೆ ಹಿಂದೂ ರುದ್ರಭೂಮಿ ಬೇಕೇ ಬೇಕು !
ಮಿಶ್ರಿಕೋಟಿ ಗ್ರಾಮಕ್ಕೆ ಹಿಂದೂ ಸಮಾಜದ ರುದ್ರಭೂಮಿ ಮಾಡುವಂತೆ ಆಗ್ರಹಿಸಿ ಗ್ರಾಮದ ಜನತೆ ಪ್ರತಿಭಟನೆ ಮಾಡಿದ್ದಾರೆ.ಗ್ರಾಮಕ್ಕೆ ರುದ್ರ ಭೂಮಿ ಬೇಕೆ ಬೇಕು ಅಂತಲೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಯನ್ನೂ ಮಾಡಿದ್ದಾರೆ.
https://publicnext.com/article/nid/Hubballi-Dharwad/Government/News/Public-News/node=633145
======
9.
ಹಸಿರು ಕ್ರಾಂತಿ ಹರಿಕಾರ ಜನ್ಮ ದಿನಕ್ಕೆ ಬೈಕ್ ರ‍್ಯಾಲಿ
ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ 115 ನೇ ಜಯಂತ್ಯೋತ್ಸವ ಸಡಗರ-ಸಂಭ್ರಮದಿಂದಲೇ ಆಚರಣೆ ಆಯಿತು. ಈ ಹಿನ್ನೆಲೆಯಲ್ಲಿಯೇ ವಿವಿಧ ಸಂಘಟನೆಗಳು ಬೈಕ್ ರ‍್ಯಾಲಿ ನಡೆಸಿದರು.
https://publicnext.com/article/nid/Hubballi-Dharwad/Infrastructure/node=633043
======
10.
ಮಕ್ಕಳ ದೇಶ ಪ್ರೇಮದ ಪಥಸಂಚಲನ !
ಹುಬ್ಬಳ್ಳಿಯಲ್ಲಿ ರಾಷ್ಟ್ರ ಪ್ರೇಮದೆಡೆಗೆ ನಮ್ಮ ನಡಿಗೆ ವಿಶೇಷ ಕಾರ್ಯಕಮ ನಡೆಯಿತು. ಇಲ್ಲಿ ಎನ್‌ಸಿಸಿ,ಸ್ಕೌಟ್ ನ ಮಕ್ಕಳು ಪಥಸಂಚಲನ ಮಾಡಿದರು.ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ ಮಕ್ಕಳಲ್ಲಿ ದೇಶ ಪ್ರೇಮ ಹುಟ್ಟಿಸಬೇಕು ಎಂದು ಹೇಳಿದರು.
https://publicnext.com/article/nid/Hubballi-Dharwad/Education/node=633151
=====
Kshetra Samachara
05/04/2022 09:43 pm