ವರದಿ: ಮಲ್ಲೇಶ್ ಸೂರಣಗಿ
ಹುಬ್ಬಳ್ಳಿ: ಏಷ್ಯಾದ ಎರಡನೇ ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿರುವ ಹುಬ್ಬಳ್ಳಿಯ ನವನಗರದ ಎಪಿಎಂಸಿಯಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ವಾರದೊಳಗೆ ನಾಲೈದು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಇದರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕಷ್ಟಪಟ್ಟು ದುಡಿದ ಹಣ, ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಕಳ್ಳರ ಪಾಲಾಗುತ್ತಿವೆ. ಒಂದು ವಾರದಲ್ಲಿಯೇ ನಾಲ್ಕೈದು ಕಳ್ಳತನ ಪ್ರಕರಣ ದಾಖಲಾಗಿರುವುದು ವರ್ತಕರಲ್ಲಿ ಆತಂಕ ಉಂಟಾಗಿದೆ.
ಇನ್ನೂ ಕಳೆದ ಗುರುವಾರ ತಡರಾತ್ರಿ ಎಪಿಎಂಸಿಯ 2 ಅಂಗಡಿಗಳಲ್ಲಿ ಕಳವು ನಡೆದಿದೆ. ಹರೇಕೃಷ್ಣ ಅಂಗಡಿಯ ಪೆಟ್ಟಿಗೆಯಲ್ಲಿದ್ದ ಸಾವಿರಾರು ರೂ.ಗಳನ್ನು ಕದ್ದಿದ್ದಾರೆ. ಇದೇ ವೇಳೆ ಇನ್ನೂ ಎರಡು ಅಂಗಡಿಗಳಲ್ಲಿ ಕಳವು ನಡೆದಿದೆ. ಎಪಿಎಂಸಿ ವ್ಯಾಪಾರಸ್ಥರೊಂದಿಗೆ ಎಪಿಎಂಸಿ- ನವನಗರ ಠಾಣೆ ಇನ್‌ಸ್ಪೆಕ್ಟರ್ ಸಭೆ ನಡೆಸಿ ಕಳವು ಪ್ರಕರಣಗಳ ಕುರಿತು ಚರ್ಚಿಸಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ವ್ಯಾಪಾರಸ್ಥರು ಮನವಿ ಮಾಡಿದ್ದರು. ಈ ಬಗ್ಗೆ ಕಳ್ಳರನ್ನು ಹಿಡಿದೇ ಹಿಡಿಯುತ್ತೇವೆ. ಇಂತಹ ಕ್ರೈಂಗಳಿಗೆ ಕಡಿವಾಣ ಹಾಕುತ್ತೇವೆ ಅಂತಾರೆ ಪೊಲೀಸ್ ಆಯುಕ್ತರು.
ಒಟ್ಟಿನಲ್ಲಿ ದಿನಕ್ಕೆ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುವ ಎಪಿಎಂಸಿಯಲ್ಲಿ ಕಳ್ಳರ ಕರಿನೆರಳು ಬಿದ್ದಿದ್ದು, ವ್ಯಾಪಾರಸ್ಥರು ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಕೂಡ ಹು-ಧಾ ನಗರ ಪೊಲೀಸ್ ಕಮೀಷನರೇಟ್ ಸೂಕ್ತ ಕ್ರಮಗಳನ್ನು ಜರುಗಿಸಿ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬೇಕಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
05/04/2022 09:11 am