ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೃತ ಮಗನ ದೇಹ ದಾನ ಮಾಡಿ ಮಾದರಿಯಾದ ಪೋಷಕರು

ಹುಬ್ಬಳ್ಳಿ: ಆ ದಂಪತಿ ತಮ್ಮ ಮಗುವಿನ ಮೇಲೆ ತುಂಬಾ ಕನಸು ಕಂಡಿದ್ದರು. ದುರಾದೃಷ್ಟವಶಾತ್ ಆ ಮಗು ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಬದುಕುಳಿಯುವುದೇ ಕಷ್ಟ ಎಂದಾಗ ಆ ಮಗುವಿನ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ನೇತ್ರದಾನ ಮಾಡಿ ಮತ್ತೊಂದು ಜೀವದ ಬಾಳಿಗೆ ಬೆಳಕು ನೀಡಿದ್ದಾರೆ. ಅಷ್ಟಕ್ಕೂ ಆ ಮನದಾಳದ ಸ್ಟೋರಿ ಏನು ಅಂತಿರಾ ಇಲ್ಲಿದೆ ನೋಡಿ.

ಈ ಮುದ್ದಾದ ಮಗುವಿನ ಹೆಸರು ಆರ್ಯನ್ ಸಿಂಗ್...ಈತನಿಗಿನ್ನೂ ಆರು ವರ್ಷ. ಹುಬ್ಬಳ್ಳಿಯ ಉಣಕಲ್ ಗ್ರಾಮದ ನಿವಾಸಿಗಳಾದ ಜಗದೀಶ್ ಸಿಂಗ್ ಹಾಗೂ ಕಾವ್ಯ ದಂಪತಿಯ ಮಗ. ಕಳೆದ ಒಂದು ತಿಂಗಳ ಹಿಂದೆ ಆರ್ಯನ್ ಸಿಂಗ್ ವಿಪರೀತ ಜ್ವರದ ಬಾಧೆಗೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪೋಷಕರು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆನಂತರದ ದಿನಗಳಲ್ಲಿ ಚೇತರಿಕೆ ಕಾಣುತ್ತಿದ್ದ ಆರ್ಯನ್ ಆರೋಗ್ಯ ಮತ್ತೆ ಕೈಕೊಟ್ಟಿತ್ತು. ಹೀಗಾಗಿ ವೈದ್ಯರು ಆರ್ಯನ್ ಬದುಕುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ. ಇನ್ನೇನು ಮಾಡುವುದು ಎಂದು ಜಗದೀಶ್ ಸಿಂಗ್ ಹಾಗೂ ಕಾವ್ಯ ದಂಪತಿ ತನ್ನ ಮಗುವಿನ ಕಣ್ಣು ದಾನ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಕಳೆದ ಸೋಮವಾರ ಬಾಲಕ ಮೃತಪಟ್ಟಿದ್ದು, ನಂತರ ಬಾಲಕನ ಕಣ್ಣುಗಳನ್ನ ಪೋಷಕರು ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪೋಷಕರ ಅಭಿಲಾಷೆಯಂತೆ ಸತ್ತೂರಿನ ಎಸ್.ಡಿ.ಎಮ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಆ ಮಗುವಿನ ಕಣ್ಣುಗಳ್ನು ಸಂಗ್ರಹಿಸಿದ್ದಾರೆ. ಪೋಷಕರಿಗೆ ಮಗನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಮತ್ತೊಬ್ಬ ಅಂಧನ ಬಾಳಿಗೆ ಕಣ್ಣು ಬೆಳಕು ನೀಡುತ್ತದೆ ಎಂಬ ಸಮಾಧಾನ ಇನ್ನೊಂದು ಕಡೆ.

ಮಕ್ಕಳು ಮೃತಪಟ್ಟ ನಂತರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಪೋಷಕರ ಸಂಖ್ಯೆ ಅತಿವಿರಳ. ಅಂತಾದ್ರಲ್ಲಿ ಈ ಪೋಷಕರು ತಮ್ಮ ಮಗನ ಕಣ್ಣುಗಳನ್ನು ಇನ್ನೊಬ್ಬರಿಗೆ ಉಪಯೋಗವಾಗಲಿ ಎಂದು ನೋವಿನಲ್ಲೂ ನೀಡಿ ಔದಾರ್ಯ ಮೆರೆದಿದಕ್ಕೆ ಹ್ಯಾಟ್ಸ್ ಅಫ್ ಹೇಳಲೇಬೇಕು.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ,

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/04/2022 06:11 pm

Cinque Terre

137.87 K

Cinque Terre

68

ಸಂಬಂಧಿತ ಸುದ್ದಿ