ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸಾರ್ವಜನಿಕರೇ ಹುಷಾರ್,ಕ್ಷಣ ಮಾತ್ರದಲ್ಲೇ ಮಾಯವಾಗುತ್ತೆ ಮೊಬೈಲ್‌

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಮೊದಲು ಮನೆಗಳ್ಳತನ, ಬೈಕ್ ಕಳ್ಳತನ ಸರಗಳ್ಳತನ ಹೆಚ್ಚಾಗಿದ್ದವು, ಆದ್ರೆ ಈಗ ಕಳ್ಳರು ಈಗ ತಮ್ಮ ವರಸೆಯನ್ನು ಬದಲಿ ಮಾಡಿದ್ದಾರೆ. ಅಷ್ಟಕ್ಕೂ ಕಳ್ಳರು ಕಂಡುಕೊಂಡ ಹೊಸ ದಾರಿ ಏನು ಅಂತ ಕುತೂಹಲ ಇದ್ರೆ ಈ ಸ್ಟೋರಿ ನೋಡಿ.

ಹೌದು, ಹೀಗೆ ಕೈಯಲ್ಲಿ ಎಫ್‌ಐಆರ್ ಕಾಪಿ ಹಿಡಿದುಕೊಂಡು ನಿಂತಿರುವ ಈ ವ್ಯಕ್ತಿಯ ಹೆಸರು ಗುರುಪಾದಪ್ಪ. ಇವರು ವೃತ್ತಿಯಲ್ಲಿ ಶಿಕ್ಷಕರು. ಇವರಿಂದ ಒಂದೇ ತಿಂಗಳಲ್ಲಿ ಎರಡು ಮೊಬೈಲ್ ಗಳು ಕಳ್ಳತನವಾಗಿವೆ. ದೂರು ನೀಡಿದರು ಪೊಲೀಸ್ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ.

ನಗರದ ಸಾಯಿಬಾಬಾ ದೇವಸ್ಥಾನದ ಪಕ್ಕ ಹಳ್ಳಿಗೆ ಹೋಗುವ ಜನರು ಬಸ್‌ಗಾಗಿ ಅಲ್ಲಿಯೇ ನಿಂತಿರುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಕಳ್ಳರು ಗದ್ದಲಿದ್ದಲ್ಲಿ ಹೋಗಿ ಮೊಬೈಲ್ ಗಳನ್ನು ಎಗರಿಸುತ್ತಿದ್ದಾರೆ. ಪಕ್ಕದಲ್ಲೆ ಉಪನಗರ ಪೊಲೀಸ್ ಠಾಣೆ ಇದ್ರು ಕೂಡ ಭಯವಿಲ್ಲದೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ.

ಒಟ್ಟಿನಲ್ಲಿ ಕಳ್ಳರ ಕಾಟದಿಂದ ಜನ ಕಂಗೆಟ್ಟದ್ದು, ಶಾಶ್ವತ ಪರಿಹಾರಕ್ಕಾಗಿ ಎದುರುನೋಡುತ್ತಿದ್ದಾರೆ.

ಈರಣ್ಣ ವಾಲಿಕಾರ

ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Nagesh Gaonkar
Kshetra Samachara

Kshetra Samachara

05/04/2022 04:22 pm

Cinque Terre

26.75 K

Cinque Terre

13

ಸಂಬಂಧಿತ ಸುದ್ದಿ