ಕುಂದಗೋಳ: ಎಲ್ಲೆಡೆ ಸಂಭ್ರಮ ಸಂತೋಷ, ಜೈ ಭಾರತ್ ಮಾತಾಕಿ ಎಂಬ ಘೋಷಣೆ ಕೂಗು, ಗ್ರಾಮದ ಹಿರಿಯರಲ್ಲಿ ಹೆಮ್ಮೆಯ ಮಗ ಭಾರತಾಂಬೆಯ ಸೇವಕ ಯೋಧನನ್ನು ಗ್ರಾಮಕ್ಕೆ ಬರಮಾಡಿಕೊಳ್ಳುವ ಖುಷಿ.
ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಯೋಧ ಶಿವಪ್ಪ ಮಲ್ಲಿಕಾರ್ಜುನ ವಿಠಲಾಪೂರ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಎಎಸ್‌ಸಿ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ಸಂದರ್ಭ ಅವರನ್ನು ತೆರೆದ ವಾಹನದಲ್ಲಿ ಗ್ರಾಮಕ್ಕೆ ಜೈಕಾರ ಘೋಷಣೆ ಕೂಗುತ್ತಾ ಬರಮಾಡಿಕೊಳ್ಳಲಾಯಿತು.
ಬಳಿಕ ಗ್ರಾಮದಲ್ಲಿ ಪಾರಿವಾಳ ಹಾರಿ ಬಿಡುವ ಮೂಲಕ ಯೋಧನಿಗೆ ವಿಶೇಷ ಗೌರವ ಸಲ್ಲಿಸಿ ಗ್ರಾಮದ ಗುರು ಹಿರಿಯರು ಸನ್ಮಾನ ಮಾಡಿ ಯೋಧ ಶಿವಪ್ಪನನ್ನು ಸ್ವಾಗತಿಸಿದರು. ಕುಟುಂಬಸ್ಥರು ಯೋಧನಿಗೆ ಆರತಿ ಬೆಳಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
Kshetra Samachara
05/04/2022 11:48 am