ನವಲಗುಂದ: ಬೇರೊಬ್ಬನ ಜೊತೆಗೆ ಮದುವೆ ನಿಶ್ಚಯವಾಗಿದ್ದರಿಂದ ಮನನೊಂದ ಯುವತಿ ತನ್ನ ಗೆಳೆಯ ಜೊತೆಗೆ ಸೇರಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನವಲಗುಂದ ತಾಲೂಕಿನ ತಡಹಾಳದಲ್ಲಿ ನಡೆದಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಇಬ್ಬರೂ ಪ್ರೇಮಿಗಳು ಸಾವನ್ನಪ್ಪಿದ್ದಾರೆ.
ತಡಹಾಳ ಗ್ರಾಮದ ಸಾವಿತ್ರಿ ಮುತ್ತಪ್ಪ ನರಗುಂದ ಅದೇ ಗ್ರಾಮದ ಬೇರೆ ಜಾತಿಯ ಯುವಕ ಮಲ್ಲಪ್ಪ ದುರ್ಗಪ್ಪ ಮಾದರನನ್ನು ಪ್ರೀತಿಸಿದ್ದಳು. ಆದರೆ ಆಕೆಗೆ ಇಂದು (ಮಂಗಳವಾರ) ಮದುವೆ ನಿಶ್ಚಯವಾಗಿತ್ತು. ಆದರೆ ನಿನ್ನೆ (ಸೋಮವಾರ) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಾವಿತ್ರಿ ಪ್ರಾಣ ಬಿಟ್ಟಿದ್ದಳು. ಇಂದು ಯುವಕ ಮಲ್ಲಪ್ಪ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
05/04/2022 02:23 pm