ಹುಬ್ಬಳ್ಳಿ : ದೇಶಕ್ಕೆ ಅನನ್ಯ ಕೊಡುಗೆ ನೀಡಿದ ಮಹಾನ ವ್ಯಕ್ತಿಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡಬೇಕು. ಮಕ್ಕಳಲ್ಲಿ ದೇಶಪ್ರೇಮ ಕುರಿತು ಅರಿವು ಮೂಡಿಸಬೇಕಾಗಿದೆ. ದೇಶದ ಬಗ್ಗೆ ಸ್ವಾಭಿಮಾನ ಮೂಡಿಸಲು ಶಿಕ್ಷಕರು ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಹೇಳಿದರು.
ಹುಬ್ಬಳ್ಳಿಯ ಘಂಟಿಕೇರಿಯ ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಹುಬ್ಬಳ್ಳಿ ಶಹರದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ "ರಾಷ್ಟ್ರ ಪ್ರೇಮದೆಡೆಗೆ ನಮ್ಮ ನಡಿಗೆ" ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ ಸಿಸಿ ಮಿಲಾಪ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಲ್ಲದ ಶಾಲೆ' ಎನ್ನುವ ಸಾಧನೆ ಮಾಡಲು ಶಿಕ್ಷಕರು ಪಣ ತೊಡಬೇಕಾಗಿದೆ. ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸೇವಾದಳ ಆರಂಭಿಸಬೇಕು. ಸಂಪೂರ್ಣ ಇತಿಹಾಸವನ್ನು ಆಧ್ಯಯನ ನಡೆಸಿ ಮಕ್ಕಳಿಗೆ ಹೇಳಬೇಕಾಗಿದೆ. ಆನ್ ಲೈನ್ ಪಾಠದಿಂದ ಮಕ್ಕಳಿಗೆ ಪ್ರಯೋಜನವಾಗುತ್ತಿಲ್ಲ. ಒತ್ತಡದಿಂದ ಮಕ್ಕಳನ್ನು ಹೊರತರುವ ಕೆಲಸವಾಗಬೇಕು.
ಮಕ್ಕಳಲ್ಲಿ ಭಾವೈಕ್ಯತೆ ಭಾವನೆ ಮೂಡಿಸಬೇಕಾಗಿದೆ. ಶಿಕ್ಷಕರು ಪ್ರಯತ್ನ ಮಾಡಿದಾಗ ಮಾತ್ರ ಬದಲಾವಣೆ ತರಲು ಸಾಧ್ಯ. ಶಿಕ್ಷಕರು ಪ್ರಾಮಾಣಿಕವಾಗಿ ಮನಸ್ಸು ಮಾಡಿದರೆ ಎಂತಹ ಕೆಲಸವನ್ನಾದರೂ ಮಾಡಬಹುದು. ಉತ್ತಮ ಭಾವನೆ, ಕಳಕಳಿ ಇಟ್ಟುಕೊಂಡು ಕೆಲಸ ಮಾಡಿದಾಗ ಶಿಕ್ಷಣ ಇಲಾಖೆ ಬೆಳೆಯಲಿದೆ. ಇಲಾಖೆ ಜಾರಿಗೆ ತರುವ ಕೆಲಸಗಳು, ಯೋಜನೆಗಳು ಯಶಸ್ವಿಯಾಗಲಿವೆ. ಮಕ್ಕಳು ಸರ್ಕಾರಿ ಶಾಲೆಯಿಂದ ಉತ್ತಮ ಶಿಕ್ಷಣ ಪಡೆದುಕೊಂಡು ಬದುಕು ರೂಪಿಸಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳಿಗೆ ಓದು ಬರಹ ಕಲಿಸಬೇಕಾಗಿದೆ. ಮಕ್ಕಳು ದೇಶದ ಒಳ್ಳೆಯ ನಾಗರೀಕಬೇಕು ಎಂದರು.
Kshetra Samachara
05/04/2022 04:27 pm