ಹುಬ್ಬಳ್ಳಿ : ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳ ಬಳಿಕ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಸಾಕಷ್ಟು ವಿಶೇಷ ಆಚರಣೆಗೆ ಸಾಕ್ಷಿಯಾಗಿದೆ. ಅರಶಿಣ, ಚಂದನ, ರಕ್ತಚಂದನ ಹೀಗೆ ಹಲವಾರು ಮಂಗಳ ದ್ರವ್ಯದ ಮೂಲಕ ಮಂಗಳಮೂರ್ತಿಗೆ ಅಭಿಷೇಕ ಮಾಡುವ ಮೂಲಕ ವಿಶೇಷವಾಗಿ ಮಹಾಮಸ್ತಕಾಭೀಷೆಕ ಆಚರಣೆ ಮಾಡಲಾಯಿತು.
ರಾಷ್ಟ್ರಸಂತ ಗುಣಧರನಂದಿ ಮಹಾರಾಜರ ಹಾಗೂ ಕುಂತುಸಾಗರ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಬಹುದೊಡ್ಡ ಸಂಭ್ರಮಕ್ಕೆ ಮಹಾಮಸ್ತಕಾಭಿಷೇಕ ಸಾಕ್ಷಿಯಾಗಿದೆ. ಜಲಾಭಿಷೇಕ, ಕ್ಷೀರಾಭಿಷೇಕದ ಬೆನ್ನಲ್ಲೇ ಚಂದನ, ರಕ್ತಚಂದನ, ಅರಶಿಣ, ಕಷಾಯ ಹೀಗೆ ಮಂಗಳದ್ರವ್ಯದ ಮೂಲಕ ಅದ್ದೂರಿಯಾಗಿ ಮಸ್ತಕಾಭಿಷೇಕ ಮಾಡುವ ಮೂಲಕ ಪಾರ್ಶ್ವನಾಥರಿಗೆ ಮಹಾಮಜ್ಜನ ಮಾಡಲಾಯಿತು.
ಇನ್ನೂ ಲಕ್ಷಾಂತರ ಭಕ್ತ ಸಮೂಹದ ನಡುವೆಯೂ ಅದ್ದೂರಿಯಾಗಿ ಇಂತಹದೊಂದ ಕಾರ್ಯಕ್ರಮ ಶಾಂತಿ, ಸೌಹಾರ್ದತೆ ಹಾಗೂ ಲೋಕ ಕಲ್ಯಾಣಕ್ಕೆ ಸಾಕ್ಷಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/01/2025 07:19 pm