ಹುಬ್ಬಳ್ಳಿ: ಹುಬ್ಬಳ್ಳಿಯ ರೂಪಂ ಚಿತ್ರಮಂದಿರದಲ್ಲಿ "ಶುಭ ಮಂಗಳ" ಚಿತ್ರದ ಪ್ರೀಮಿಯರ್ ಶೋ ಇಂದು (ಅ.10) ಸಂಜೆ 6.30ಕ್ಕೆ ನಡೆಯಲಿದೆ.
ಸಂತೋಷ್ ಗೋಪಾಲ್ ನಿರ್ದೇಶನದ ಶುಭ ಮಂಗಳ ಚಿತ್ರ ತಂಡ ಸಾರ್ವಜನಿಕರ ಜೊತೆಗೆ ಬೆರೆಯುವ ಸದುದ್ದೇಶದಿಂದ ಪ್ರೀಮಿಯರ್ ಶೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಟ ರಾಕೇಶ್ ಮಯ್ಯ, ನಟಿಯರಾದ ಹಿತಾ ಚಂದ್ರಶೇಖರ್, ಮೇಘನಾ ಗಾಂವ್ ಕರ್ ಮತ್ತಿತರರು ಆಗಮಿಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/10/2022 05:14 pm