ಹುಬ್ಬಳ್ಳಿ: ಗಂಡು ಮಟ್ಟಿನ ನಾಡು ಹುಬ್ಬಳ್ಳಿಯಲ್ಲಿ ದೊಡ್ಮನೆ ಹುಡುಗ ವತಿಯಿಂದ, ಪವರ್ ಸ್ಟಾರ್ ಪುನೀತರಾಜಕುಮಾರ ಕೊನೆಯದಾಗಿ ನಟಿಸಿರುವ ಗಂಧದ ಗುಡಿ ಚಿತ್ರವನ್ನು ಒಂದು ತಿಂಗಳ ಮುಂಚಿತವಾಗಿ ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ದಲ್ಲಿ ಅಪ್ಪು ಭಾವಚಿತ್ರಕ್ಕೆ ಹಾಲು ಹಾಕಿ ದೀಪ ಬೆಳಗುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.
ಅಭಿಮಾನಿಗಳಾದ ಶೇಖರಯ್ಯ ಮಠಪತಿ, ಮಂಜುನಾಥ ಯರಗಂಬಳ್ಳಿ ಮಠ, ಶಿವು ಮೇಟಿ, ಮಂಜುನಾಥ ಅರಕೇರಿ, ಅಜಿತ್ ಬೈರಾಗಿ, ರಾಜು ಅರಕೇರಿ, ರಾಮು ಗಣೇಶ, ಅಮರ್ ಸಿದ್ದಪ್ಪ ಹಾಗೂ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
Kshetra Samachara
23/09/2022 11:45 am