ಹುಬ್ಬಳ್ಳಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದಲ್ಲಿ ಉತ್ತರ ಕರ್ನಾಟಕದ ಬಾಲ ಪ್ರತಿಭೆ ಇರೋದು ಬಹುತೇಕರಿಗೆ ಗೊತ್ತಿಲ್ಲ ಅನಿಸುತ್ತದೆ. ಹೌದು.! ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ನಿವಾಸಿ ಅಖಿಲೇಶ್ ಪೈ ಕೆಜಿಎಫ್-2 ಚಿತ್ರದಲ್ಲಿ ಅಭಿನಯಿಸಿ ಭೇಷ್ ಎನಿಸಿಕೊಂಡಿದ್ದಾನೆ.
ಈಗಷ್ಟೇ ಐದನೇ ತರಗತಿಗೆ ಕಾಲಿಟ್ಟಿರೋ ಈ ಹುಡುಗನ ಎನರ್ಜಿ ಲೆವಲ್ ಬೇರೇನೆ ಇದೆ. ಮಾತಿಗೆ ನಿಂತ ಅಂದ್ರೆ ಮುಗಿತು. ಕೆಜಿಎಫ್-2 ಚಿತ್ರದಲ್ಲಿ ಯಶ್ ಗುಂಡು ಹಾರಿಸಿದೆಂತೇನೆ ಕೇಳುತ್ತದೆ. ಅಷ್ಟು ಅದ್ಭುತವಾಗಿ ಮಾತನಾಡೋ ಈ ಹುಡುಗ ರಾಕಿಂಗ್ ಸ್ಟಾರ್ ಯಶ್ ಅಪ್ಪಟ ಅಭಿಮಾನಿನೇ ಆಗಿದ್ದಾನೆ.
ಯಶ್ ಸಿನಿಮಾ ನೋಡ್ತಾ, ನೋಡ್ತಾನೇ ಅಭಿನಯದ ಗೀಳು ಹೆಚ್ಚಿಕೊಂಡಿದ್ದಾನೆ. ಕೆಜಿಎಫ್-2 ಆಡಿಷನ್‌ನಲ್ಲೂ ಸೆಲೆಕ್ಟ್ ಆಗಿ ಸೂಪರ್ ಆಗಿಯೇ ಅಭಿನಯಿಸಿದ್ದಾನೆ. ಈತನ ಅಭಿನಯ ಕಂಡವರು "ಯಾರು ಈ ಹುಡುಗ" ಅಂತಲೇ ಕೇಳೋ ಮಟ್ಟಿಗೂ ಅಭಿನಯ ಮಾಡಿದ್ದಾನೆ. ಈತನ Exclusive Chit-Chat ನಿಮ್ಮ PublickNext ನಲ್ಲಿದೆ. ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 02:36 pm