ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಎರಡನೇ ದಿನವೂ ಕೆಜಿಎಫ್ 2 ಹವಾ

ಹುಬ್ಬಳ್ಳಿ : ವಿಶ್ವದಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್ ಚಾಪ್ಟರ್ -2 ಚಿತ್ರ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಈ ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಎರಡನೇ ದಿನವಾದ ಇಂದು ಕೂಡಾ ಕೆಜಿಎಫ್ ಚಾಪ್ಟರ್-2 ಹೌಸಪುಲ್ ಪ್ರದರ್ಶನ ಕಾಣುತ್ತಿದೆ.

ಈಗಾಗಲೇ ಕೆಜಿಎಫ್ ಚಾಪ್ಟರ್- 1 ಗೆ ದೊಡ್ಡಮಟ್ಟದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಅದರಂತೆ ಕೆಜಿಎಫ್ ಚಾಪ್ಟರ್-2 ಗೆ ಸಖತ್ ರೆಸ್ಪಾನ್ಸ್ ದೊರೆತಿದೆ. ಪ್ರಶಾಂತ ನೀಲ್ ನಿರ್ದೇಶನಕ್ಕೆ ಜನ ಸಲಾಂ ಎಂದಿದ್ದಾರೆ.

ಹುಬ್ಬಳ್ಳಿಯ ಶೃಂಗಾರ, ಅಪ್ಸರಾ, ಸುಧಾ, ಪಿವಿಆರ್ ಗಳಲ್ಲಿ ಬೆಳಗ್ಗೆಯಿಂದಲೇ ಹೌಸಫುಲ್ ಪ್ರದರ್ಶನಗೊಂಡಿದೆ. ಅದರಲ್ಲೂ ಸುಧಾ ಮತ್ತು ಅಪ್ಸರ್ ಚಿತ್ರಮಂದಿರಗಳ ಎದುರು ಯಶ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಕಟೌಟ್ ಹಾಗೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ.

ಇಂದೂ ಕೂಡಾ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ್ ಮಾಡಿ, ಪಟಾಕಿ ಸಿಡಿಸಿ, ಯಶ್ ಪರ ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.

Edited By : Manjunath H D
Kshetra Samachara

Kshetra Samachara

15/04/2022 02:50 pm

Cinque Terre

13.9 K

Cinque Terre

0

ಸಂಬಂಧಿತ ಸುದ್ದಿ