ಹುಬ್ಬಳ್ಳಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್-2 ರಿಲೀಸ್ ಗೆ ಸಿದ್ಧವಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಾತ್ರಿಯಿಂದಲೇ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ.
ಹೌದು.. ಕೆಜಿಎಫ್ ಚಿತ್ರದ ಬಿಡುಗಡೆ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಬಹುತೇಕ ಚಿತ್ರಮಂದಿರದಲ್ಲಿ ಕಟೌಟ್ ಹಾಗೂ ಫ್ಲಕ್ಸ್ ಹಾಕಿ ಅಭಿಮಾನಿಗಳಿಂದ ರಾತ್ರಿಯಿಂದಲೇ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.
ಇನ್ನೂ ಯಶ್ ಅಭಿನಯದ ಕೆಜಿಎಫ್ ಮೊದಲ ಚಿತ್ರ ಸಾಕಷ್ಟು ಸದ್ದು ಮಾಡಿ ಅಭಿಮಾನಿಗಳನ್ನು ಹುಚ್ಚೆದು ಕುಣಿಯುವಂತೆ ಮಾಡಿದ್ದ ಚಿತ್ರದ ಮುಂದುವರಿದ ಭಾಗವಾಗಿ ಕೆಜಿಎಫ್-2 ಚಿತ್ರ ಬಿಡುಗಡೆಗೆ ಈಗಾಗಲೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಚಿತ್ರದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/04/2022 10:39 pm