ಹುಬ್ಬಳ್ಳಿ: ಗಿರೀಶ್ ವಯಸ್ಸು 36 ಚಿತ್ರದಲ್ಲಿ ಪಾತ್ರ ಮಾಡಿದ್ದು ತುಂಬಾ ಸಂತಸ ತಂದಿದೆ. ಹಾಸ್ಯಮಯವಾಗಿ ಈ ಚಿತ್ರದಲ್ಲಿ ಮೂಡಿ ಬಂದಿದೆ ಎಂದು ಹಿರಿಯ ಹಾಸ್ಯ ಕಲಾವಿದ ಎಮ್.ಎಸ್ ಉಮೇಶ ಅವರು ಹೇಳಿದರು.
ಪಬ್ಲಿಕ್ ನೆಕ್ಸ್ಟ್ ಮೂಲಕ ಹುಬ್ಬಳ್ಳಿಯ ಹಳೆಯ ನೆನೆಪಿನ ಹಂಚಿಕೊಂಡ ಎಮ್.ಎಸ್ ಉಮೇಶ ಅವರು, ಚಿಕ್ಕ ವಯಸ್ಸಿನಿಂದಲೇ ಹುಬ್ಬಳ್ಳಿ ನನಗು ನಂಟು ಇದೆ. ಇಲ್ಲಿ ಸುಮಾರು ನಾಟಕಗಳನ್ನು ಮಾಡಿದ್ದೆನೆ. ಅಷ್ಟೇ ಅಲ್ಲದೆ ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹುಬ್ಬಳ್ಳಿಯಲ್ಲಿಯೇ ಅಲ್ಲಿಂದ ಇಲ್ಲಿಯವರೆಗೂ ಸುಖವಾಗಿ ಇದ್ದೆವೆ ಎಂದರು.
ಆಗಿನ ರಂಗಭೂಮಿ ವೈಭವ ನೆನೆಸಿಕೊಂಡರೆ ತುಂಬಾ ಸಂತೋಷ ಆಗುತ್ತೆ. ಉತ್ತರ ಕರ್ನಾಟಕ ಜನರು ಅಂದ್ರೆ ಒಂದು ವಿಶೇಷ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಹಂಚಿಕೊಂಡರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/03/2022 10:05 pm