ಹುಬ್ಬಳ್ಳಿ: 'ಏಕ್ ಲವ್ ಯಾ' ನಮ್ಮ ಸಿನಿಮಾ ಗೆದ್ದಿದೆ. ಎಲ್ಲರಿಗೂ ಧನ್ಯವಾದ ಎಂದು ಹುಬ್ಬಳ್ಳಿಯಲ್ಲಿ ಸಿನಿಮಾ ನಿರ್ದೇಶಕ ಪ್ರೇಮ್ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಜನರಿಗೆ ಅಭಿನಂದನೆ ಸಲ್ಲಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರ ನೋಡಿ ರಕ್ಷಿತಾ ಚೆನ್ನಾಗಿ ಮಾಡಿದಿಯಾ ಕಣಯ್ಯ ಅಂದ್ಳು, ನಂಗೆ ಖುಷಿಯಾಗಿದೆ. ಹೊಸಬರನ್ನು ಹಾಕೊಂಡು ಸಿನಿಮಾ ಮಾಡಿದ್ದೇನೆ. ಲವ್, ರೇಪ್ ಎಳೆಯನ್ನು ಇಟ್ಕೊಂಡು ಸಿನಿಮಾ ಮಾಡಿದ್ದೆ. ಜನ ಚೆನ್ನಾಗಿ ಸ್ವೀಕರಿಸಿದ್ದಾರೆ. ಕನ್ನಡ ಸಿನಿಮಾಗಳನ್ನು ಬೆಳೆಸಬೇಕು ಎಂದರು.
ಪೈರಸಿ ವಿರುದ್ಧ ಹೋದರೆ ನಮ್ಮ ನಮ್ಮಲ್ಲೇ ಜಗಳ ಹಚ್ಚುತ್ತಾರೆ. ಹೀರೋಗಳ ಹೆಸರಿಗೆ ಟ್ಯಾಗ್ ಮಾಡಿ, Uk, Londonನಿಂದ ಲಿಂಕ್ ಕಳಿಸುತ್ತಾರೆ. ಪೈರಸಿ ಮಾಡುವವರನ್ನು ಹಿಡಿಯೋಕೆ ಆಗ್ತಿಲ್ಲ. ಮುಂದಿನ ವಾರ ಸಿಎಂ ಅವರನ್ನು ಭೇಟಿ ಮಾಡುತ್ತೇನೆ. ಪೈರಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಕನ್ನಡ ಸಿನಿಮಾ ರಂಗದಲ್ಲಿ ಒಗ್ಗಟ್ಟು ಪ್ರವೃತ್ತಿ ಬಂದಿಲ್ಲ. ಫಿಲ್ಮ್ ಚೇಂಬರ್‌ಗೆ ಹೇಳಿದರೆ ಕಂಪ್ಲೇಂಟ್ ಕೊಡಿ ಅಂತಾರೆ. ಇಲ್ಲಿ ಯಾರಿಗ್ಯಾರು ಬರಲ್ಲ. ಅದು ತಪ್ಪೇನಲ್ಲ, ಅಪ್ಪಾಜಿ ಇದ್ದಾಗ ಈ ರೀತಿ ಇರಲಿಲ್ಲ. ಈವಾಗ ಆ ರೀತಿ ಇಲ್ಲ, ನಾನು ಓಪನ್ ಆಗಿ ಹೇಳುತ್ತೇನೆ. ಇಡೀ ಸಿನಿಮಾ ಇಂಡಸ್ಟ್ರಿ ಬ್ಯುಸಿನೆಸ್ ಆಗಿದೆ. ಎಲ್ಲರೂ ಬೇರೆ ಬೇರೆ ಭಾಷೆ ಸಿನಿಮಾ ಡಿಸ್ಟ್ರಿಬ್ಯೂಷನ್ ಮಾಡ್ತಾರೆ. ಮೊದಲು ನಾನೇ ಕಳ್ಳ ಅಂತ ಒಪ್ಪಿಕೊಳ್ಳುತ್ತೇನೆ ಎಂದರು.
Kshetra Samachara
01/03/2022 06:43 pm