ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾಳೆ ಅಮೃತ ಅಪಾರ್ಟ್ಮೆಂಟ್ ರಾಜ್ಯಾದ್ಯಂತ ಬಿಡುಗಡೆ

ಹುಬ್ಬಳ್ಳಿ: ಉತ್ತರ ಕರ್ನಾಟಕದವರೇ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಅಮೃತ ಅಪಾರ್ಟ್ಮೆಂಟ್ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಶಾಮ್ ಸುಂದರ ಬಿದರಕುಂದಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, G9 ಕಮ್ಯೂನಿಕೇಶನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರವನ್ನು ಗುರುರಾಜ ಕುಲಕರ್ಣಿ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ ಎಂದರು.

ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಅರ್ಜುನ್ ಅಜಿತ್, ಕೆಂಪರಾಜ್ ಅರಸ್ ಅವರ ಸಂಕಲನದ ಮ್ಯಾಜಿಕ್ ಟಚ್ ಕೂಡ ಚಿತ್ರದಲ್ಲಿದೆ. ಅಲ್ಲದೇ ಕೆ.ಕಲ್ಯಾಣ, ವಿ.ಮನೋಹರ ಮತ್ತು ಬಿ.ಆರ್.ಪೊಲೀಸ್ ಪಾಟೀಲ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಪರಿಚಯಿಸುವ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರರಂಗದ ಬೆಳವಣಿಗೆ ದೂರದೃಷ್ಟಿಯಿಂದ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.

Edited By : Manjunath H D
Kshetra Samachara

Kshetra Samachara

25/11/2021 01:39 pm

Cinque Terre

13.58 K

Cinque Terre

0

ಸಂಬಂಧಿತ ಸುದ್ದಿ