ಧಾರವಾಡ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ನಾಡಿನ ಜನರಲ್ಲಿ ಬಹಳಷ್ಟು ದುಃಖವನ್ನ ತಂದಿದೆ. ಅವರು ಅಭಿನಯಿಸಿರುವಂತಹ ಹಾಡುಗಳು ಹಾಗೂ ಚಿತ್ರಗಳು ಬಹಳಷ್ಟು ಜನಪ್ರಿಯವಾಗಿವೆ ಮಕ್ಕಳು ಸಹ ಕೇಳಿ ಆನಂದಿಸುತ್ತಾರೆ. ಅದರಂತೆಯೇ ಧಾರವಾಡದಲ್ಲಿನ ಮುರುಗರಾಜೇಂದ್ರ ನಗರದ ಒಂದು ವರ್ಷದ ಪುಟ್ಟ ಕಂದಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಹಾಡಿಗೆ ತಲೆದೂಗುವ ವಿಡಿಯೋ ಈಗ ವೈರಲ್ ಆಗಿದೆ.
ಪುಟ್ಟ ಕಂದಮ್ಮ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ವಿಆರ್ ಲವ್ವಿನ ಪವರ್ಸ್ಟಾರ್ ಎಂಬ ಹಾಡಿಗೆ ತಲೆದೂಗಿಸುತ್ತಿರುವ ವಿಡಿಯೋ ತುಣುಕುಗಳು ವೈರಲ್ ಆಗಿದೆ. ಧಾರವಾಡದ ಮುರುಘರಾಜೇಂದ್ರ ನಗರದ ತ್ರಿಷಿಕಾ ಕಮತ ಎಂಬ 1 ವರ್ಷದ ಪುಟ್ಟ ಬಾಲಕಿ ಪುನೀತ್ ರಾಜಕುಮಾರ್ ಅವರ ಹಾಡುಗಳನ್ನು ಮಾತ್ರ ಹಾಕಬೇಕಂತೆ ಇನ್ನು ಅಪ್ಪು ಹಾಡು ಕೇಳುತ್ತಿದ್ದಂತೆ ಮಗು ಡ್ಯಾನ್ಸ್ ಮಾಡುವ ವಿಡಿಯೋ ಹೃದಯ ಮುಟ್ಟುವಂತಿದೆ.
ಅಗಲಿದ ಅಪ್ಪು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು
Kshetra Samachara
31/10/2021 03:32 pm