ಕುಂದಗೋಳ : ಚಂದನವನದ ಹೆಸರಾಂತ ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದು, ಕನ್ನಡಕ್ಕೆ ಎಂದು ಭರಿಸಿದ ನಷ್ಟ ದೇವರು ಅವರ ಆತ್ಮಕ್ಕೆ ಶಾಂತಿ ಜೊತೆ ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ನೀಡಲೇಂದು ಶಾಸಕಿ ಕುಸುಮಾವತಿ ಪವರ್ ಸ್ಟಾರ್ ನಿಧನಕ್ಕೆ ಸಂತಾಪ ಸೂಚಿಸಿದರು.
ಇಂದು ತಮ್ಮ ನಿವಾಸದಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಶಾಸಕಿ ಕುಸುಮಾವತಿ ಪುನೀತ್ ರಾಜಕುಮಾರ್ ಇನ್ನಿಲ್ಲಾ ಎಂಬ ನೋವು ತಡೆದುಕೊಳ್ಳುವಂತಹದ್ದಲ್ಲಾ, ಅವರಲ್ಲದೇ ಕೊರೊನಾ ಸಂದರ್ಭದಲ್ಲೂ ಸಹ ಕೆಲ ಚಿತ್ರನಟರು ನಮ್ಮನ್ನ ಅಗಲಿದ್ದಾರೆ, ಅವರೆಲ್ಲಾ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
Kshetra Samachara
30/10/2021 06:05 pm