ಧಾರವಾಡ: ಕನ್ನಡ ಚಿತ್ರರಂಗದ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ನಟ ಪುನೀತ್ ರಾಜ್ಕುಮಾರ್ ಇತ್ತೀಚೆಗೆ ಧಾರವಾಡದ ನುಗ್ಗಿಕೇರಿ ಹನುಮಪ್ಪನ ದರ್ಶನ ಪಡೆದಿದ್ದರು. ಅಷ್ಟೇ ಅಲ್ಲದೇ ಅವರು ನುಗ್ಗಿಕೇರಿ ಹನುಮಪ್ಪನ ಭಕ್ತರು ಕೂಡ ಆಗಿದ್ದರು.
ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿರುವ ಹನುಮಂತ ದೇವಸ್ಥಾನಕ್ಕೆ ಅಪ್ಪು ಹಲವು ಬಾರಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಯುವರತ್ನ ಶೂಟಿಂಗ್ ವೇಳೆ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದರು.
ನುಗ್ಗಿಕೇರಿ ಹನುಮಪ್ಪನ ಪವಾಡ ಹಾಗೂ ವಿಶೇಷತೆ ಬಗ್ಗೆ ತಿಳಿದುಕೊಂಡ ಬಳಿಕ ಅಪ್ಪು ನುಗ್ಗಿಕೇರಿ ಹನುಮಂತನ ಭಕ್ತರಾಗಿದ್ದರು. ಉತ್ತರ ಕರ್ನಾಟಕಕ್ಕೆ ಬಂದಾಗ ತಪ್ಪದೇ ದರ್ಶನ ಪಡೆಯುತ್ತಿದ್ದ ಅವರು, ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಹನುಮಂತ ದೇವರ ದರ್ಶನ ಪಡೆದಿದ್ದರು.
Kshetra Samachara
29/10/2021 06:04 pm