ಹುಬ್ಬಳ್ಳಿ: ಯುವರತ್ನ ಸಿನಿಮಾದ ಶೂಟಿಂಗ್ ಗೆ ಹುಬ್ಬಳ್ಳಿಗೆ ಆಗಮಿಸಿದ ವೇಳೆಯಲ್ಲಿ ಹುಬ್ಬಳ್ಳಿ-ಧಾರವಾಡದ ಬಗ್ಗೆ ಪುನೀತ್ ರಾಜಕುಮಾರ ಅವರು ಬಿಚ್ಚಿಟ್ಟಿರುವ ಮನದಾಳದ ಮಾತುಗಳ ಹಾಗೂ ಭಾವನೆಗಳ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.
ಪುನೀತ್ ರಾಜಕುಮಾರ ಅವರ ತಂದೆ ಹಾಗೂ ಅಜ್ಜಿಯವರ ಕಾಲದಿಂದಲೂ ಹುಬ್ಬಳ್ಳಿಯ ಜೊತೆಗಿನ ನಂಟಿನ ಬಗ್ಗೆ ಹಲವಾರು ಮಾತುಗಳನ್ನು ಪುನೀತ್ ರಾಜಕುಮಾರ ಅವರು ಬಿಚ್ಚಿಟ್ಟಿದ್ದಾರೆ.
ಗೋವಿಂದ ಆಚಾರ್ಯರನ್ನು ಡಾ.ರಾಜಕುಮಾರ ಅವರು ಭೇಟಿ ಆಗುತ್ತಿದ್ದ ಪರಿಯನ್ನು ಹಾಗೂ ತಾವು ನಡೆದುಕೊಳ್ಳುತ್ತಿರುವ ಬಗ್ಗೆ ಪುನೀತ ರಾಜಕುಮಾರ ಕಾರಿನಲ್ಲಿ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಇಂತಹದೊಂದು ಸಂಭಾಷಣೆಯನ್ನು ಮಾಡಿರುವುದು ನಿಜಕ್ಕೂ ಹುಬ್ಬಳ್ಳಿ-ಧಾರವಾಡದ ಬಗ್ಗೆ ಪುನೀತ್ ಅವರ ಒಡನಾಟವನ್ನು ಈ ವಿಡಿಯೋ ಬಿಚ್ಚಿಟ್ಟಿದೆ...
Kshetra Samachara
29/10/2021 04:40 pm