ಹುಬ್ಬಳ್ಳಿ: ಸಾಮಾಜಿಕ ಜಾಲತಾಣ ಸಕ್ರಿಯವಾಗಿ ಬೆಳೆದಂತೆ ವೆಬ್ ಸಿರೀಸ್ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದಿವೆ. ಈ ನಿಟ್ಟಿನಲ್ಲಿ ಸಾಕಷ್ಟು ಕಲೆ,ಸಾಹಿತ್ಯ, ಸಂಸ್ಕೃತಿಗೆ ಹೆಸರಾಗಿರುವ ಧಾರವಾಡ ಜಿಲ್ಲೆಯಲ್ಲಿ ಈಗ ವೆಬ್ ಸಿರೀಸ್ ಚಿತ್ರೀಕರಣ ಆರಂಭವಾಗುತ್ತಿದೆ.
ಹೌದು. ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ವೆಬ್ ಸಿರೀಸ್ ಪ್ಲಾಟ್ ಫಾರಂನಲ್ಲಿ ಮತ್ತೊಂದು ಅಚ್ಚೊತ್ತಲು ಧಾರವಾಡ ಜಿಲ್ಲೆಯ ಈ ಒಂದು ತಂಡ ಸಿದ್ಧವಾಗಿದೆ. ಕಿಶೋರ್ ಬಜಾಜ್ ಅವರ ನೇತೃತ್ವದಲ್ಲಿ ಧಾರವಾಡ ಟಾಕೀಸ್ ಪ್ರಸ್ತುತ ಪಡಿಸುತ್ತಿರುವ ಇಂಟರ್ ಸಿಟಿ ಆಧಾರಿತ ವೆಬ್ ಸರಣಿ ಚಲನಚಿತ್ರ ನಿರ್ಮಾಣ ಸಂಸ್ಥೆ ಧಾರವಾಡದಲ್ಲಿ ವೆಬ್ ಸಿರೀಸ್ ಚಿತ್ರೀಕರಣ ಆರಂಭಿಸಲು ಸಜ್ಜಾಗಿದೆ. ಅಲ್ಲದೆ ಈಗಾಗಲೇ ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ಚಿತ್ರೀಕರಣಕ್ಕೆ ಸಿದ್ಧವಾಗಿದೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್‌ಗೆ ಮಾಹಿತಿ ನೀಡಿದ ಧಾರವಾಡ ಟಾಕೀಸ್ ಸಂಸ್ಥಾಪಕ ಕಿಶೋರ್ ಬಜಾಜ್, ನಾವು ಮೂರು ವೆಬ್ ಸರಣಿಗಳನ್ನು ಚಿತ್ರೀಕರಿಸಲು ಆರಂಭಿಸಿದ್ದೇವೆ. ಮೊದಲಿಗೆ, ನಾವು ವಾದಿರಾಜಗುರು ವೈಭವ, ನಂತರ ಸಪ್ತಪದಿ ಮತ್ತು 9 ಡೆಡ್ಲಿ ಸೀನ್ಸ್ ವೆಬ್ ಸಿರೀಸ್ ನಿರ್ಮಾಣ ಮಾಡಲಾಗುತ್ತದೆ ಎಂದರು.
ಇನ್ನೂ ವಾದಿರಾಜ ಗುರು ವೈಭವ ಶಿರಸಿಯಲ್ಲಿರುವ ಭವ್ಯವಾದ ಸೊಂಡೆ ಮಠದ ಬಗ್ಗೆ ಹೇಳುತ್ತಿದ್ದರೆ, ಸಪ್ತಪದಿ ವೈವಾಹಿಕ ಜೀವನದಲ್ಲಿ 7 ಹಂತಗಳನ್ನು ಹೊಂದಿರುತ್ತದೆ. ಇದು ಪ್ರೇಮಕಥೆಯಾಗಿರುತ್ತದೆ. ಅಲ್ಲದೇ 9 ಡೆಡ್ಲಿ ಸೀನ್ಸ್ ಸಾಮಾನ್ಯ ಮನುಷ್ಯ ತನ್ನ ಜೀವನದಲ್ಲಿ ಕನಿಷ್ಠ 9 ಪಾಪಗಳನ್ನು ಹೇಗೆ ಮಾಡುತ್ತಾನೆ ಎಂಬುದು ತಿಳಿದೋ ತಿಳಿಯದೆಯೋ ಆಗಿರುತ್ತದೆ ಎಂಬುವಂತ ಕಥಾ ಹಂದಿರದಲ್ಲಿ ನಿರ್ಮಾಣವಾಗಲಿದೆ ಎಂದರು.
ಅಲ್ಲದೇ ಧಾರವಾಡ ಮೂಲದ ರ್ಯಾಪರ್ ಅಭಿಷೇಕ್ ಅವರ ಧಾರವಾಡ ಟಾಕೀಸ್ ರ್ಯಾಪ್ ವಿಡಿಯೋ ಬಿಡುಗಡೆಗೆ ಸಿದ್ಧವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ವೆಬ್ ಸಿರೀಸ್ ಉತ್ತಮವಾಗಿ ಬೆಳೆಯಲಿ ಎಂಬುವುದು ನಮ್ಮ ಆಶಯ.
Kshetra Samachara
17/10/2021 07:27 pm