ಹುಬ್ಬಳ್ಳಿ: ಡಿ ಬಾಸ್ ಅಭಿಮಾನಿಗಳ ಬಹುನಿರೀಕ್ಷಿತ ರಾಬರ್ಟ್ ಚಿತ್ರ ತೆರೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ..ಈಗಾಗಲೇ ಸಿನಿಮಾ ಪ್ರೊಮೋಷನ್ ಜೋರಾಗಿಯೇ ಮಾಡಿರುವ ಚಿತ್ರತಂಡ ಆಡಿಯೋ ಲಾಂಚ್ ನ್ನು ಗಂಡು ಮೆಟ್ಟಿದ ನಾಡಿನಲ್ಲಿ ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆಸಿದೆ...ಇದೇ ಭಾನುವಾರ ನಡೆಯಲಿರುವ ಆಡಿಯೋ ಲಾಂಚ್ ಪ್ರಿ ಇವೆಂಟ್ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ..
ಕಳೆದ ಒಂದು ವರ್ಷದಿಂದ ಕಾಯುತ್ತಿದ್ದ ಆ ಸಮಯಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ.ಡಿ ಬಾಸ್ ದರ್ಶನನ್ನು ಬಿಗ್ ಸ್ಕ್ರೀನ್ ನಲ್ಲಿ ಕಣ್ತುಂಬಿಕೊಳ್ಳಬೇಕು ಅಂತ ಕಾಯುತ್ತಿದ್ದ ಅಭಿಮಾನಿ ಸೆಲೆಬ್ರೆಟಿಗಳ ನಿರೀಕ್ಷೆಯಂತೆ ಮಾರ್ಚ್ 11 ಕ್ಕೆ ಬಹುನಿರೀಕ್ಷಿತ ರಾಬರ್ಟ್ ಚಿತ್ರ ತೆರೆಕಾಣಲಿದೆ. ಇದಕ್ಕೂ ಮುನ್ನ ಪ್ರೋಮೋಷನ್ ಆರಂಭಿಸಿರುವ ಚಿತ್ರತಂಡ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಆಯೋಜಿಸಿದೆ. ಇದೆ ಭಾನುವಾರ ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ಡಿ ಬಾಸ್ ದರ್ಶನ್ ಗಾಗಿ ಬೃಹತ್ ಸ್ಟೇಜ್ ಸಿದ್ಧವಾಗುತ್ತಿದೆ. ಹುಬ್ಬಳ್ಳಿಯ ಕೇಶ್ವಾಪುರದ ರೈಲ್ವೇ ಮೈದಾನದಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದ್ದು,ಡಿ ಬಾಸ್ ದರ್ಶನ್ ಸೇರಿದಂತೆ ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ವಿಲನ್ ಪಾತ್ರ ನಿರ್ವಹಿಸಿರುವ ತೆಲುಗು ಸ್ಟಾರ್ ಜಗಪತಿ ಬಾಬು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ..
ಇನ್ನೂ ಹಲವಾರು ವರ್ಷಗಳಿಂದ ಡಿ ಬಾಸ್ ಆಡಿಯೋ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆದಿರಲಿಲ್ಲ..ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಜಗ್ಗುದಾದ ಹುಬ್ಬಳ್ಳಿಯಲ್ಲಿ ಆಡಿಯೋ ಲಾಂಚ್ ಗೆ ಸಮ್ಮತಿಸಿದ್ದು ಯಜಮಾನನನ್ನು ಸ್ವಾಗತಿಸೋಕೆ ಹುಬ್ಬಳ್ಳಿ ಜನ ಕಾಯುತ್ತಿದ್ದಾರೆ. ಇನ್ನು ಬೃಹತ್ ಮೈದಾನ ಆಗಿರುವುದರಿಂದ ಒಂದು ಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ..ಈಗಾಗಲೇ ಸ್ಯಾಂಡ್ ವುಡ್ ನಲ್ಲಿ ಹಾಡುಗಳ ಮೂಲಕವೇ ಸೆನ್ಸೇಷನಲ್ ಕ್ರಿಯೆಟ್ ಮಾಡಿರುವ ರಾಬರ್ಟ್ ಸಿನಿಮಾ ಡಿ ಬಾಸ್ ಅಭಿಮಾನಿಗಳ ಪಾಲಿಗೆ ಬಿಗ್ ಗಿಫ್ಟ್ ಅಂತಲೇ ಬಿಂಬಿತವಾಗಿದೆ
ಒಟ್ಟಾರೆ ಭಾನುವಾರ ಸಂಜೆ ನಡೆಯಲಿರುವ ಅದ್ದೂರಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದ್ದು, ಯಜಮಾನನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿ ಸೆಲೆಬ್ರಿಟಿಗಳು ಕಾಯುತ್ತಿದ್ದಾರೆ..ಅಭಿಮಾನಿಗಳ ಪಾಲಿನ ಡಿ ಬಾಸ್ ಕಾರ್ಯಕ್ರಮಕ್ಕೆ ಬೃಹತ್ ಸಂಖ್ಯೆಯಲ್ಲಿ ಭಾಗಿಯಾಗಲು ಪ್ಲಾನ್ ಮಾಡಿದ್ದಾರೆ.
Kshetra Samachara
27/02/2021 05:26 pm