ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕೊರೊನಾ ಏಫೆಕ್ಟ : ಬೇಡಿಕೆ ಈಡೇರಿಸುವರೆಗೂ ನೋ ಪಿಕ್ಚರ್! ಅಂದ ಮಾಲಿಕರು

ಧಾರವಾಡ : ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಬಾಗಿಲು ಮುಚ್ಚಿದ ಸಿನಿಮಾ ಮಂದಿರಗಳನ್ನು ಲಾಕ್ ಡೌನ್ ತೆರವಾದ ನಂತರ ಮಾಲಿಕರು ಸಿನಿಮಾ ಬಾಗಿಲು ತೆರೆದು,ಚಿತ್ರ ಪ್ರದರ್ಶನ ಮಾಡುತ್ತಾರೆ ಎಂಬ ಚಿತ್ರ ರಸಿಕರ ಕನಸು ಹುಸಿಯಾಗಿದೆ.

ಹೌದು ! ಒಂದೆಡೆ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರ ಹತ್ತು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಲಾಕ್ ಡೌನ್ ಘೋಷಣೆ ಮಾಡಿತ್ತು,ಇದರಿಂದಾಗಿ ಸಣ್ಣ ವ್ಯಾಪಾರಿಗಳಿಂದ ಉದ್ಯಮಗಳಿಂದ ಎಲ್ಲಾ ರೀತಿಯ ಉದ್ಯಮಗಳು ನೆಲಕಚ್ಚಿದ್ದವು.ಆದರೆ ಲಾಕ್ ಡೌನ್ ಪರಿಣಾಮ ಸಾಕಷ್ಟು ನಷ್ಟ ಅನುಭವಿಸಿದ್ದು, ಮಾಲೀಕರು ಸುಮಾರು 40-50 ಲಕ್ಷ ನಷ್ಟದಲ್ಲಿದ್ದು,ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಇಟ್ಟಿದು,ಅದನ್ನು ಈಡೇರಿಸುವರೆಗೂ ಚಿತ್ರಮಂದಿರ ಪ್ರಾರಂಭ ಮಾಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ.

ಅ.15 ರಿಂದ ಎಲ್ಲಾ ಚಿತ್ರಮಂದಿರಗಳನ್ನು ಖಾಲಿ ಖಾಲಿಗಿ ಕಂಡುಬರುತ್ತಿದ್ದು,ಚಿತ್ರ ಮಂದಿರ ಓಪನ್ ಮಾಡದಂತೆ ಕರ್ನಾಟಕ ಫಿಲ್ಮ್ ಎಕ್ಸಿಬಿಷನ್ ಫೆಡರೇಶನ್ ಗದಗದಲ್ಲಿ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗಿದೆ.ಚಿತ್ರಮಂದಿರದ ಮಾಲಿಕರು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಇಟ್ಟಿದ್ದು ಅದನ್ನು

ಈಡೇರಿಸುವರೆಗೂ ಚಿತ್ರಮಂದಿರ ಪ್ರಾರಂಭ ಮಾಡಬಾರದು ಎಂಬ ತಿರ್ಮಾನಕ್ಕೆ ಬರಲಾಗಿದೆ ಎಂದು ಚಿತ್ರಮಂದಿರದ ಮಾಲಿಕರಾದ ಕಾಂತೇಶ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/11/2020 08:21 am

Cinque Terre

27.95 K

Cinque Terre

1

ಸಂಬಂಧಿತ ಸುದ್ದಿ