ಹಾಸ್ಯ ಕಲಾವಿದನೊಬ್ಬ ನಾಯಕ ನಟನಾಗಿ ಅಭಿನಯಿಸಿ ಗೆಲ್ಲೋದು ಅಂದ್ರೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಾಮಾನ್ಯದ ಮಾತಲ್ಲ. ಈಗಾಗಲೇ ಶರಣ್, ಕೋಮಲ್ ಸೇರಿದಂತೆ ಅನೇಕರು ನಾಯಕ ಪಾತ್ರದಲ್ಲಿ ಗೆಲುವಿನೊಂದಿಗೆ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಆ ಸಾಲಿಗೆ ಇದೀಗ ಉಪಾಧ್ಯಕ್ಷನಾಗಿ ಚಿಕ್ಕಣ್ಣ ಎಂಟ್ರಿಯಾಗ್ತಿದ್ದಾರೆ. ಈ ಮೂಲಕ ನಾಯಕ ನಟನಾಗುವ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇನ್ನು ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ದರ್ಶನ್, ಪುನೀತ್, ಯಶ್, ಧ್ರುವ ಸರ್ಜಾ ಬೆನ್ನುತಟ್ಟಿ ಖುಷಿಯಿಂದ ಶುಭಾಶಯ ಕೋರಿದ್ದು ಇದೇ ವಾರ ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸುತ್ತಿರುವ ಉಪಾಧ್ಯಕ್ಷ ಚಿತ್ರದ ಟೈಟಲ್ ಅನೌನ್ಸ ಆಗಿದೆ.
ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಚಿತ್ರ ವೀಕ್ಷಕರಿಗೆ ಸಖತ್ ಮನರಂಜನೆ ಸಿಗಲಿದೆ. ಸದ್ಯ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸ ಮುಗಿದಿದ್ದು ಫಸ್ಟ್ ಸಿನಿಮಾ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡ ಉಳಿದಂತೆ ಸಿನಿಮಾ ನಾಯಕಿ, ಇತರ ಕಲಾವಿದರು ಹಾಗೂ ಟೆಕ್ನಿಷಿಯನ್ ಆಯ್ಕೆ ನಡೆಯುತ್ತಿದ್ದು ಡಿಸೆಂಬರ್ ತಿಂಗಳಲ್ಲಿ ಶೂಟಿಂಗ್ ಪ್ರಾರಂಭಿಸುವ ಪ್ಲ್ಯಾನ್ ಚಿತ್ರ ತಂಡದ್ದಾಗಿದೆ.
ಈವರೆಗೆ ಅಭಿಮಾನಿಗಳು ನೋಡಿರದ ರೀತಿಯಲ್ಲಿ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಗೇಟಪ್ ಇರಲಿದ್ದು ಹೇರ್ ಸ್ಟೈಲ್, ಮ್ಯಾನರಿಸಂ, ಎಲ್ಲವೂ ಹೊಸದಾಗಿದ್ದು ಆಡಿಯನ್ಸ್ ಎಷ್ಟರ ಮಟ್ಟಿಗೆ ಈ ಸಿನಿಮಾ ಮೆಚ್ಚಲಿದ್ದಾರೆ ಎಂಬುದು ಸಿನಿಮಾ ಬಿಡುಗಡೆಗೆ ನಂತರವೇ ಗೊತ್ತಾಗಬೇಕಿದೆ.
ಇನ್ನು ಈಗಾಗಲೇ ಚಿಕ್ಕಣ್ಣ ಹಾಸ್ಯ ನಟನಾಗಿ ಅಭಿನಯಿಸಿದ ಕೃಷ್ಣ ಟಾಕೀಜ್, ಪೊಗರು, ತ್ರಿವಿಕ್ರಮ, ರೈಡರ್, ಮದಗಜ, ರಾಬರ್ಟ್ ಸಿನಿಮಾಗಳು ಸದ್ಯ ತೆರೆಗೆ ಬರಲು ಪೈಪೋಟಿಯಲ್ಲಿವೆ.
Kshetra Samachara
22/10/2020 12:52 pm