ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ರಾಕ್ ಗಾರ್ಡನ್ ಕಲಾಕೃತಿಗಳು ಗಮನಸೆಳೆಯುತ್ತಿವೆ.
ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಜಾನಪದ ಸಂಸ್ಕೃತಿಯ ಕಲಾಕೃತಿಗಳನ್ನು ಪ್ರತಿಬಿಂಬಿಸಿ ಗಮನಸೆಳೆದ ಗಾರ್ಡನ್ ಆಗಿದ್ದು, ಧಾರವಾಡದ ಕೃಷಿ ಮೇಳದಲ್ಲೂ ಈ ಗಾರ್ಡನ್ ವತಿಯಿಂದ ತಂದಿಡಲಾಗಿದ್ದ ಕಲಾಕೃತಿಗಳು ರೈತರ ಗಮನಸೆಳೆದವು.
ಕೃಷಿ ಮೇಳದ ಮುಖ್ಯ ವೇದಿಕೆಯ ಮುಂಭಾಗದಲ್ಲೇ ಹೊಲದಲ್ಲಿ ಎತ್ತುಗಳ ಸಹಾಯದಿಂದ ರೆಂಟೆ ಹೊಡೆಯುತ್ತಿರುವ ರೈತ, ಹಾಲು ಕರೆಯುತ್ತಿರುವ ರೈತ ಮಹಿಳೆ, ಆಡು, ಕುರಿ, ನಾಯಿ, ಹಸು ಸೇರಿದಂತೆ ಅನೇಕ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಕೃಷಿ ಮೇಳದಲ್ಲಿ ಇವು ಪ್ರಮುಖ ಆಕರ್ಷಣೆಯಾಗಿದ್ದವು. ಬೇರೆ ಬೇರೆ ಜಿಲ್ಲೆಗಳಿಂದ ಬಂದ ರೈತರು ಆ ಕಲಾಕೃತಿಗಳನ್ನು ನೋಡಿ ಖುಷಿಪಟ್ಟರು. ಅಲ್ಲದೇ ಅನೇಕರು ಅವುಗಳ ಮುಂದೆ ಸೆಲ್ಪಿ ಕೂಡ ಕ್ಲಿಕ್ಕಿಸಿಕೊಂಡರು.
Kshetra Samachara
19/09/2022 10:46 pm