ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನಿಂಗಪ್ಪನ ಹೊಸ ನಿರ್ಧಾರಕ್ಕೆ ಹಸನಾಯಿತು ಬದುಕು; ಕೃಷಿಹೊಂಡದಿಂದ ಹರಿಯಿತು ಹರ್ಷದ ಹೊನಲು

ನವಲಗುಂದ: ಒಕ್ಕಲಿಗನ ಬದುಕಿನಲ್ಲಿ ಹೊಸ ಕಳೆಯು ಬಂದಾಯಿತು. ಓಬೀರಾಯನ ಕಾಲದ ಕೃಷಿ ಕಾರ್ಯಕ್ಕೆ ಬ್ರೇಕ್ ಹಾಕಿದ ರೈತ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಹೊಸ ಆಯಾಮಕ್ಕೆ ಮಗ್ಗುಲು ಬದುಲಿಸಿದ್ದು, ಮಾತ್ರವಲ್ಲದೇ ಹೊಸ ಸಂಚಲನ ಸೃಷ್ಟಿಗೆ ನಾಂದಿ ಹಾಡಿದ್ದಾನೆ. ಮಹತ್ವದ ನಿರ್ಧಾರದಿಂದ ನಿಂಗಪ್ಪನ ಬದುಕು ಈಗ ಹಸನಾಗಿದೆ.

ನವಲಗುಂದ ತಾಲೂಕಿನ ಭದ್ರಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸಾಪೂರ ಗ್ರಾಮದ ರೈತನ ಕೃಷಿಯ ಬದುಕು ಅಭಿವೃದ್ಧಿಯ ಪಥದತ್ತ ಮುನ್ನಡೆಯುತ್ತಿದೆ. ಕೃಷಿಯಲ್ಲಿ ಹೊಸ ಕ್ರಾಂತಿಗಾಗಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿ ಹೊಂಡ ತೆಗೆಸಿದ ರೈತ ನಿಂಗಪ್ಪ ತೊರವಿ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿ ಬೆಳೆ ರಾಶಿ ಮಾಡಿ ಮಾದರಿಯ ಒಕ್ಕಲಿಗನಾಗಿದ್ದಾನೆ.

ಬಸಾಪೂರದ ತನ್ನ ನಾಲ್ಕು ಎಕರೆ ಜಮೀನಿನಲ್ಲಿ 100×100 ಅಳತೆಯ ಕೃಷಿ ಹೊಂಡ ತೆಗೆಸಿದ ರೈತ ನಿಂಗಪ್ಪ 25,000 ವಾರ್ಷಿಕ ಆದಾಯದ ಜೀವನದಲ್ಲಿಯೇ 2.5 ಲಕ್ಷ ಆದಾಯವನ್ನು ಗಳಿಸುವ ಮೂಲಕ ಮಾದರಿಯಾಗಿದ್ದಾನೆ. ಆತನ ಸಾಧನೆಯ ಮಾತನ್ನು ಅವರ ಬಾಯಿಂದಲೇ ಕೇಳಿ.

ಒಟ್ಟಿನಲ್ಲಿ ಕೈಲಾಗದು ಎಂದು ಕೈಕಟ್ಟಿ ಕುಳಿತರೇ ಆಗದು ಕೆಲಸವು ಮುಂದೆ ಎಂಬಂತೆ ತನ್ನ ಬೆವರಿನ ಹನಿಗೆ ಬೆಲೆ ಕೊಡುವ ನಿಂಗಪ್ಪ ಈಗ ತನ್ನ ದುಡಿಮೆಯಲ್ಲಿಯೇ ಹೊಸ ಕ್ರಾಂತಿ ಮಾಡಿದ್ದಾನೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/08/2022 02:16 pm

Cinque Terre

163.69 K

Cinque Terre

0

ಸಂಬಂಧಿತ ಸುದ್ದಿ