ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೃಷಿಯಲ್ಲಿ ಸಾಧನೆ ಮಾಡಿದ ಶರಣಪ್ಪ; ಕೃಷಿ ಹೊಂಡದಿಂದ ಬದುಕು ಹಸನಾಯಿತಪ್ಪ

ನವಲಗುಂದ: ಕೈ ಕೆಸರಾದರೆ ಬಾಯಿ ಮೊಸರು ಎಂಬುವಂತ ಮಾತು ನಿಜಕ್ಕೂ ಅಕ್ಷರಶಃ ಸತ್ಯ. ಇಂತಹ ಒಕ್ಕಲುತನ ನಂಬಿಕೊಂಡ ಶರಣಪ್ಪ ಈಗ ಎಲ್ಲರೂ ಶರಣು ಎಂಬುವಂತೇ ಮಾಡಿದ್ದಾನೆ. ದೇಶಪಾಂಡೆ ಫೌಂಡೇಶನ್ ಕೃಷಿ ಹೊಂಡ ನಿರ್ಮಾಣದಿಂದ ಶರಣಪ್ಪನ ಬದುಕು ಈಗ ಖುಷಿಯ ಕ್ಷಣವಾಗಿ ನಡೆಯುತ್ತಿದೆ.

ನವಲಗುಂದ ತಾಲೂಕಿನ ಬಸಾಪೂರದ ಶರಣಪ್ಪ ಗುರುನಾಥ ಈಸರಣ್ಣವರ ಅಧುನಿಕ ಕೃಷಿಯ ಬಗ್ಗೆ ಚಿಂತನೆ ನಡೆಸುತ್ತಿರುವಾಗಲೇ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡದ ನೆರವು ಒದಗಿಸಿದ್ದು, ಲಕ್ಷಾಂತರ ರೂಪಾಯಿ ಆದಾಯದ ಮೂಲಕ ಹೊಸ ಬದುಕಿಗೆ ನಾಂದಿ ಹಾಡಿದಂತಾಗಿದೆ. ತನ್ನ ಬದುಕಿನ ಬಗ್ಗೆ ರೈತನ ಮಾತು ಇಲ್ಲಿದೆ ನೋಡಿ...

ಒಟ್ಟಿನಲ್ಲಿ 7 ಎಕರೆ ಜಮೀನಿನಲ್ಲಿ ಹೆಸರು, ಬಿಟ್ಟಿ ಹತ್ತಿ, ಗೋವಿನ ಜೋಳ, ಈರುಳ್ಳಿ, ಸೂರ್ಯಕಾಂತಿ, ತೆಂಗಿನಕಾಯಿ ಹಾಗೂ ಹಲಸಂದಿ ಬೆಳೆದ ರೈತ 60,000 ಆದಾಯಕ್ಕೆ ಬ್ರೇಕ್ ಹಾಕಿ ಲಕ್ಷಾಧೀಶನಾಗಿದ್ದಾನೆ. 3.5 ಲಕ್ಷ ವಾರ್ಷಿಕ ಆದಾಯದ ಮೂಲಕ ಅನ್ನದಾತನಾಗಿ ಹೊರ ಹೊಮ್ಮಿದ್ದಾನೆ.

Edited By : Shivu K
Kshetra Samachara

Kshetra Samachara

25/08/2022 03:01 pm

Cinque Terre

64.87 K

Cinque Terre

0

ಸಂಬಂಧಿತ ಸುದ್ದಿ